ರಸ್ತೆಗಳಲ್ಲಿ ಓಡಾಡುವಾಗ ವಾಹನಗಳು ಬಂದು ನಿಮ್ಮನ್ನು ಗುದ್ದುವ ಸಾಧ್ಯತೆಗಳು ಬೆಂಗಳೂರಿನಂಥ ಊರುಗಳಲ್ಲಿ ಬಹಳಷ್ಟು ಇರುತ್ತದೆ. ಆದರೆ, ವಾಹನಗಳ ಚಾಲಕರೇ ಖುದ್ದು ಬಂದು ನಿಮಗೆ ಗುದ್ದುವ ಪ್ರಮೇಯ ಬಂದರೆ?
ಆಟೋ ರಿಕ್ಷಾ ಚಾಲಕರೊಬ್ಬರು ಗುದ್ದಿದ ಪರಿಣಾಮ ಬೆಂಗಳೂರಿನ ಮಹಿಳೆಯೊಬ್ಬರು ಗಾಯಗೊಂಡ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೇರೊಂದು ವಾಹನದೊಂದಿಗೆ ಅಪಘಾತವಾಗುವುದನ್ನು ತಪ್ಪಿಸಲು ಮುಂದಾದ ಆಟೋರಿಕ್ಷಾ ಚಾಲಕ ತನ್ನ ವಾಹನವನ್ನು ವೈರ್ ಒಂದಕ್ಕೆ ಗುದ್ದಿದ ಪರಿಣಾಮ ಅದು ಉರುಳಿಬಿದ್ದಿದೆ.
ಈ ಫೋರ್ಸ್‌ನಲ್ಲಿ ಚಾಲಕ ಗಾಳಿಯಲ್ಲಿ ಹಾರಿ ಸುನಿತಾ ಎಂಬ ಮಹಿಳೆಗೆ ಢಿಕ್ಕಿ ಹೊಡೆದಿದ್ದಾರೆ. ಈ ಘಟನೆಯು ಜುಲೈ 16ರಂದು ಘಟಿಸಿದೆ. ಮಹಿಳೆಯ ದೇಹಕ್ಕೆ 52 ಹೊಲಿಗೆಗಳನ್ನು ಹಾಕಲಾಗಿದೆ.
https://twitter.com/IGIF_/status/1289326214532882435?ref_src=twsrc%5Etfw%7Ctwcamp%5Etweetembed%7Ctwterm%5E1289326214532882435%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fbengaluru-auto-driver-comes-flying-and-crashes-into-woman-video-goes-viral-watch%2F630394