ಬಳ್ಳಾರಿ: ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ಅದೆಷ್ಟೋ ಜನರು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದರೆ, ಗ್ರಾಮೀಣ ಪ್ರದೇಶದ ಜನರು ಮೂಢನಂಬಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಸೋಂಕು ತೊಲಗಿಸಲು ಮನೆ ಮನೆಗಳಲ್ಲಿ ಅನ್ನ ಮಾಡಿ ಗ್ರಾಮದ ಸುತ್ತ ನೂರಾರು ಕೆಜಿ ಅನ್ನ ಸುರಿದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಗ್ಗಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪುರುಷ ಅಥವಾ ಮಹಿಳೆ ಎಂದೂ ಈ ಗುಟ್ಟನ್ನು ಬೇರೆಯವರ ಬಳಿ ಬಿಟ್ಟು ಕೊಡಬೇಡಿ
ಕೊರೊನಾ ಸೋಂಕು ಕಡಿಮೆಯಾಗಬೇಕು ಎಂದು ಯಾರೋ ಹಿರಿಯರು ಪ್ರತಿ ಮನೆಯಲ್ಲಿಯೂ 5 ಕೆ.ಜಿ.ಅನ್ನ ಮಾಡಿ ಒಂದೆಡೆ ಸಂಗ್ರಹಿಸಿ ಗ್ರಾಮದ ಹೊರಭಾಗದಲ್ಲಿ ಚೆಲ್ಲುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಂತೆ ಈಗ ಗ್ರಾಮದ ಮನೆ ಮನೆಯಲ್ಲೂ 5 ಕೆಜಿ ಅನ್ನ ಮಾಡಿ ಒಂದು ಟ್ರ್ಯಾಕ್ಟರ್ ನಲ್ಲಿ ಅನ್ನ ಸಂಗ್ರಹಿಸಿ ಗ್ರಾಮದ ಹೊರ ಭಾಗಕ್ಕೆ ಕೊಂಡೊಯ್ದು ಎಸೆದಿದ್ದಾರೆ.
ಎಲ್ಲ ಕಂಪನಿ ಬ್ಲೇಡ್ ವಿನ್ಯಾಸ ಒಂದೇ ರೀತಿ ಇರುತ್ತೆ ಏಕೆ ಗೊತ್ತಾ….?
ಗ್ರಾಮದ ಸುತ್ತ ರಾಶಿ ರಾಶಿ ಅನ್ನವನ್ನು ಚೆಲ್ಲಲಾಗಿದೆ. ಕೊರೊನಾ ಸಂಕಷ್ಟದಲ್ಲಿ ತುತ್ತು ಅನ್ನಕ್ಕಾಗಿ ಹಲವರು ಪರದಾಡುತ್ತಿದ್ದರೆ ಕಗ್ಗಲು ಗ್ರಾಮದ ಜನರು ಟ್ರ್ಯಾಕ್ಟರ್ ಗಟ್ಟಲೇ ಅನ್ನವನ್ನು ಗ್ರಾಮದ ಸುತ್ತ ಚೆಲ್ಲುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.