
ಬೆಳಗಾವಿ: ಗುಟ್ಕಾ ಜಗಿದು ರಸ್ತೆಯಲ್ಲಿ ಉಗುಳಿದ ಯುವಕನಿಗೆ ಅಂಗಿ ಬಿಚ್ಚಿ ಒರೆರಿಸುವಂತೆ ಪೌರಾಯುಕ್ತರು ತಾಕೀತು ಮಾಡಿದ್ದಾರೆ. ಆಯುಕ್ತರ ಹಿಗ್ಗಾಮುಗ್ಗಾ ತರಾಟೆಗೆ ಬೆಚ್ಚಿಬಿದ್ದ ಯುವಕ ಅಂಗಿ ಬಿಚ್ಚಿ ಉಗುಳಿದ ಜಾಗ ಒರೆಸಿ ಸ್ವಚ್ಛಗೊಳಿಸಿದ್ದಾನೆ.
ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಯಾರು ಸಾರ್ವಜನಿಕ ಸ್ಥಳಗಳಲ್ಲಿ ಉಗಳದಂತೆ ಸರ್ಕಾರ ನಿಯಮ ರೂಪಿಸಿದ್ದು, ಹೀಗಿದ್ದರೂ ಅನೇಕರು ಎಲ್ಲೆಂದರಲ್ಲಿ ಉಗಳುತ್ತಿರುವುದು ಕಂಡು ಬರುತ್ತಿದೆ.
ಹೀಗೆ ನಿಪ್ಪಾಣಿಯಲ್ಲಿ ರಸ್ತೆಯಲ್ಲಿ ಉಗುಳಿದ ಯುವಕನೊಬ್ಬನನ್ನು ಗಮನಿಸಿದ ಪೌರಾಯುಕ್ತರು ಅಂಗಿ ಬಿಚ್ಚಿ ಒರೆಸುವಂತೆ ತಾಕೀತು ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ರೀತಿ ಹಲವೆಡೆ ಜನ ಉಗುಳುವುದನ್ನು ಗಮನಿಸಿದ ಆಯುಕ್ತರು ತರಾಟೆಗೆ ತೆಗೆದುಕೊಂಡು ಉಳಿದವರಿಂದಲೇ ಸ್ವಚ್ಛಗೊಳಿಸಿದ್ದಾರೆನ್ನಲಾಗಿದೆ.