ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಹಾನಿಯಾದ ಕಾರಣ ಸಂತ್ರಸ್ತರಿಗೆ ಪರಿಹಾರ ಹಣ ನೀಡಲಾಗಿದೆ.
ಹೀಗೆ ಪರಿಹಾರದ ಹಣ ಪಡೆದ ಒತ್ತುವರಿದಾರರಿಗೆ ಬಿಬಿಎಂಪಿ ಶಾಕ್ ನೀಡಲಿದೆ ಎನ್ನಲಾಗಿದೆ. ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದಲ್ಲಿ ಪರಿಹಾರ ನೀಡಲಾಗಿದ್ದು, ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ಒತ್ತುವರಿದಾರರ ತೆರವಿಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.
ರಾಜಕಾಲುವೆ ಒತ್ತುವರಿ ಜಾಗದಲ್ಲಿ ನೂರಾರು ಕುಟುಂಬಗಳು ಇವೆ. ಪರಿಹಾರವನ್ನು ಪಡೆದ 344 ಕುಟುಂಬಗಳ ಪೈಕಿ 100 ಕುಟುಂಬಗಳು ಒತ್ತುವರಿ ಜಾಗದಲ್ಲಿವೆ ಎನ್ನಲಾಗಿದೆ.
ಒತ್ತುವರಿ ಸರ್ವೆ ನಡೆಸಿದರೆ 100 ಕಟ್ಟಡಗಳನ್ನು ಡಿಮಾಲಿಷ್ ಮಾಡಬೇಕಾಗುತ್ತದೆ. ನಿನ್ನೆ ಪರಿಹಾರದ ಚೆಕ್ ಪಡೆದವರಿಗೆ ಮುಂದೆ ಸಂಕಷ್ಟ ಎದುರಾಗಲಿದೆ. ರಾಜಕಾಲುವೆ ಒತ್ತುವರಿ ತೆರವಿಗೆ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ 100 ಮನೆ ಒತ್ತುವರಿ ಜಾಗದಲ್ಲಿವೆ. ಪರಿಹಾರದ ಚೆಕ್ ಪಡೆದ ಕುಟುಂಬಗಳೇ ಒತ್ತುವರಿ ಜಾಗದಲ್ಲಿವೆ. 344 ಕುಟುಂಬಗಳಿಗೆ ತಲಾ 25 ಸಾವಿರ ಪರಿಹಾರ ನೀಡಲಾಗಿದ್ದು, ಇವುಗಳಲ್ಲಿ 100 ಕುಟುಂಬಗಳು ಒತ್ತುವರಿ ಜಾಗದಲ್ಲಿವೆ ಎಂದು ಹೇಳಲಾಗಿದೆ.