ಕೋವಿಡ್ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ ಮನೆಯ ಆವರಣವನ್ನೇ ನೀಡಿದ ಬಸವರಾಜ ಬೊಮ್ಮಾಯಿ..! 14-05-2021 10:57AM IST / No Comments / Posted In: Karnataka, Latest News ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸಂಖ್ಯೆ ವೈದ್ಯಲೋಕದ ಮುಂದೆ ದೊಡ್ಡ ಸವಾಲನ್ನೇ ಸೃಷ್ಟಿಸಿದೆ. ಸೂಕ್ತ ಸಮಯಕ್ಕೆ ಸರಿಯಾಗಿ ಬೆಡ್ ಸಿಗದೇ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನ ಗಮನದಲ್ಲಿರಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆಯ ಮುಂದಿನ ಜಾಗದಲ್ಲೇ ಕೊರೊನಾ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಕ್ಷೇತ್ರದ ಜನತೆಗೆ ಸಹಾಯ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿರುವ ಮನೆಯ ಮುಂಭಾಗದಲ್ಲಿರುವ ಜಾಗವನ್ನೇ ಬೊಮ್ಮಾಯಿ ಕೊರೊನಾ ಸೋಂಕಿತರ ಚಿಕಿತ್ಸೆಗೆಂದು ನೀಡಿದ್ದಾರೆ. ಇಂದು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಬೊಮ್ಮಾಯಿ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಬೊಮ್ಮಾಯಿ 25 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನ ದೇಣಿಗೆ ರೂಪದಲ್ಲಿ ನೀಡಿದರು. ಹಾಗೂ ತಮ್ಮ ಮನೆಯ ಮುಂದಿರುವ ಆವರಣದಲ್ಲಿ ಕೊರೊನಾ ಸೋಂಕಿತರಿಗೆಂದೇ 50 ಹಾಸಿಗೆಗಳ ವ್ಯವಸ್ಥೆ ಮಾಡಿರೋದಾಗಿಯೂ ಬೊಮ್ಮಾಯಿ ಹೇಳಿದ್ದಾರೆ. ಸಚಿವರ ಈ ಕಾರ್ಯಕ್ಕೆ ಹಾವೇರಿ ಜಿಲ್ಲೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ.