
ಯಾರದ್ದೋ ಸಿಟ್ಟಿಗೆ ಇನ್ಯಾರ ಮೇಲೋ ಹಗೆ ತೀರಿಸಿಕೊಳ್ಳುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಹೌದು, ಸ್ವಂತ ಮೊಮ್ಮಗನ ಮೇಲೆ ಅಜ್ಜಿಯೊಬ್ಬಳು ಮನಬಂದಂತೆ ಹಲ್ಲೆ ಮಾಡಿದ್ದಾಳೆ.
ಮುಬೀನಾ ಎಂಬ ಮಹಿಳೆ ಅಳಿಯನ ಮೇಲಿನ ಸಿಟ್ಟಿಗೆ 2 ವರ್ಷದ ಕಂದಮ್ಮನಿಗೆ ಶಿಕ್ಷೆ ನೀಡಿದ್ದಾಳೆ. ಈ ಘಟನೆ ನಡೆದಿರೋದು ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ. ಬಾಲಕನ ತಂದೆ ಇಮ್ರಾನ್ ಪಾಷ ಮತ್ತು ತಾಯಿ ಅಜೀರಾ ಪ್ರೀತಿಸಿ ಮದುವೆಯಾಗಿದ್ದರಂತೆ. ಈ ವಿಚಾರವಾಗಿ ಅಳಿಯನ ಮೇಲೆ ಕೋಪ ಇತ್ತಂತೆ ಈ ಅಜ್ಜಿಗೆ. ಈ ಕೋಪವನ್ನು ತನ್ನ ಸ್ವಂತ ಮೊಮ್ಮಗನ ಮೇಲೆ ತೀರಿಸಿಕೊಳ್ಳುತ್ತಿದ್ದಳಂತೆ.
ಇನ್ನು ಈ ಘಟನೆ ಸಂಬಂಧ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಮಗುವನ್ನು ರಕ್ಷಣೆ ಮಾಡಲಾಗಿದ್ದು, ಮುಖ ಹಾಗು ಕಣ್ಣಿಗೆ ಪೆಟ್ಟು ಬಿದ್ದಿದ್ದರಿಂದ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಈ ಅಜ್ಜಿ ಮನೆಯಿಂದ ಪರಾರಿಯಾಗಿದ್ದಾಳೆ.