alex Certify ಗುಡ್ ನ್ಯೂಸ್: ಸಹಾಯಧನ, ಸಾಲ ಸೇರಿ ವಿವಿಧ ಯೋಜನೆಯ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ಸಹಾಯಧನ, ಸಾಲ ಸೇರಿ ವಿವಿಧ ಯೋಜನೆಯ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

ಬಳ್ಳಾರಿ: ಮಹಾನಗರಪಾಲಿಕೆ ವತಿಯಿಂದ 2020-21ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ದೀನ್‍ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ ಕೈಗೊಳ್ಳುವ ಅರ್ಹರಿಗೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ಯೋಜನೆ: ವೈಯಕ್ತಿಕ ಸ್ವಯಂ ಉದ್ಯೋಗ ಕೈಗೊಳ್ಳುವ ಅರ್ಹರಿಗೆ; ಸೇವಾವಲಯ ಬ್ಯಾಂಕ್‍ಗಳಿಂದ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಹಾಗೂ ಸಾಲದ ಮೇಲೆ ಶೇ.7ಕ್ಕಿಂತ ಮೇಲ್ಪಟ್ಟ ಬಡ್ಡಿಗೆ ಬಡ್ಡಿ ಸಹಾಯಧನ ಪಡೆಯುವುದಕ್ಕೆ 18 ವರ್ಷ ವಯೋಮಿತಿ ಹೊಂದಿರಬೇಕು, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರಾಗಿರಬೇಕು ಅಥವಾ ಕುಟುಂಬದ ಸದಸ್ಯರಲ್ಲಿ ಒಬ್ಬರು ಸಂಘದ ಸದಸ್ಯರಾಗಿರಬೇಕು.

ಸ್ವಯಂ ಉದ್ಯೋಗ ಪಡೆಯುವ ಗುಂಪುಗಳಿಗೆ: ಎಸ್.ಜೆ.ಎಸ್.ಆರ್.ವೈ ಯೋಜನೆ ಡೇ-ನಲ್ಮ್ ಯೋಜನೆಯ ಅಥವಾ ನಗರದ ಬಡವರ ಕುಟುಂಬ ಉದ್ದಿಮೆ/ಚಟುವಟಿಕೆಗಳನ್ನು ಪ್ರಾರಂಭಿಸಲು 10 ಲಕ್ಷ ರೂ.ಗಳವರೆಗೆ ಸೇವಾ ವಲಯದ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಹಾಗೂ ಸಾಲದ ಮೇಲೆ ಬಡ್ಡಿ ದರ ಶೇ.7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ನೀಡಲಾಗುವುದು.

ಈ ಕಾರ್ಯಕ್ರಮದಲ್ಲಿ ಸಾಲ ಸೌಲಭ್ಯ ಪಡೆಯುವ ಗುಂಪಿನ ಎಲ್ಲಾ ಸದಸ್ಯರ ವಯಸ್ಸು 18 ವರ್ಷ ಪೂರೈಸಿರಬೇಕು, ಗುಂಪು ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಸಂಘ ಅಥವಾ ಕನಿಷ್ಟ 5 ಜನ ಸದಸ್ಯರು ಇರಬೇಕು ಹಾಗೂ ಸದರಿ ಸದಸ್ಯರು ಶೇ.70 ರಷ್ಟು ಬಡ ಕುಟುಂಬದವರಾಗಿರಬೇಕು.

ಸ್ವ-ಸಹಾಯ ಗುಂಪುಗಳ ರಚನೆ ಯೋಜನೆಗೆ: ನಗರದ ವ್ಯಾಪ್ತಿಯಲ್ಲಿ 10 ರಿಂದ 20 ಬಡ ಮಹಿಳೆಯರ ಗುಂಪು 19 ಸ್ವ-ಸಹಾಯ ಗುಂಪುಗಳನ್ನು ರಚಿಸಲು ಸದಸ್ಯತ್ವ ಬಯಸಿರಬೇಕು. 18 ರಿಂದ 50 ವರ್ಷದವರಾಗಿದ್ದು, ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು, ಕಡ್ಡಾಯವಾಗಿ ಶೇ.70 ರಷ್ಟು ಬಡ ಕುಟುಂಬದವರಾಗಿರಬೇಕು.

ಅರ್ಹರು  ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ತೀಚಿನ ಮೂರು ಭಾವ ಚಿತ್ರಗಳು, ವಿದ್ಯಾರ್ಹತೆ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಜುಲೈ 03ರೊಳಗೆ ಮಹಾನಗರ ಪಾಲಿಕೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ.08392-273479 /278168 ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...