ತುಮಕೂರು: ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲ ನೀಡಿದರೆ ನೂರಕ್ಕೆ ನೂರರಷ್ಟು ವಾಪಸ್ ಬರುತ್ತದೆ. ಹೀಗಾಗಿ ಬೀದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ 10 ಸಾವಿರ ರೂ. ನೀಡಲಾಗುವುದು.
ಹೀಗೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ತುಮಕೂರಿನ ಕ್ಯಾತ್ಸಂದ್ರದಲ್ಲಿ ಶ್ರಮಿಕರು, ಸಣ್ಣ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಶ್ರಮಿಕರು ಪಡೆದ ಸಾಲವನ್ನು ನೂರಕ್ಕೆ ನೂರರಷ್ಟು ವಾಪಸ್ ಮಾಡುವ ವಿಶ್ವಾಸದಿಂದ ಬಡವರ ಬಂಧು ಯೋಜನೆ ಅಡಿ ಅವರಿಗೆ ಸಾಲ ವಿತರಿಸಲು ಒತ್ತು ನೀಡಬೇಕೆಂದು ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶ್ರಮಿಕರು, ಅತಿ ಸಣ್ಣ ವ್ಯಾಪಾರಿಗಳು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಬೀದಿಬದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ 10 ಸಾವಿರ ರೂಪಾಯಿ ನೀಡಲಿದ್ದು ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ.