
ನವಜಾತ ಗಂಡು ಶಿಶುವನ್ನು ತಾಯಿ ಗದ್ದೆಯಲ್ಲಿ ಬಿಸಾಡಿದ ಘಟನೆ ರಾಯಚೂರು ಜಿಲ್ಲೆ ಹರ್ವಾಪುರ ಗ್ರಾಮದ ಬಳಿ ನಡೆದಿದೆ.
ರಾತ್ರಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹರ್ವಾಪುರ ಗ್ರಾಮದ ಬಳಿ ನವಜಾತ ಶಿಶುವನ್ನು ಬಿಸಾಡಲಾಗಿದೆ.
ಅಳುವಿನ ಶಬ್ದ ಕೇಳಿದ ಗ್ರಾಮಸ್ಥರು ಗದ್ದೆ ಬಳಿ ಹೋಗಿ ನೋಡಿದ್ದಾರೆ. ಗದ್ದೆಯಲ್ಲಿದ್ದ ಶಿಶುವನ್ನು ರಕ್ಷಣೆ ಮಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆನ್ನಲಾಗಿದೆ.