ಬೆಳಗಾವಿ: ಸೋಯಾಬಿನ್ ಬೆಳೆದು ನಷ್ಟ ಅನುಭವಿಸಿದ ರೈತರಿಗೆ 3000 ರೂ. ಪರಿಹಾರ ಧನವನ್ನು ಆಯಾ ಕಂಪನಿಗಳಿಂದಲೇ ಕೊಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಯಾಬಿನ್ ಬಿತ್ತನೆ ಬೀಜ ಸರಿಯಾಗಿ ಮೊಳಕೆಯೊಡೆಯದ ಕಾರಣ ರೈತರಿಗೆ ನಷ್ಟ ಉಂಟಾಗಿದೆ. ನಷ್ಟ ಉಂಟಾದ ರೈತರಿಗೆ ಎಕರೆಗೆ 3000 ರೂ. ಪರಿಹಾರಧನವನ್ನು ಆಯಾ ಕಂಪನಿಗಳಿಂದಲೇ ಕೊಡಿಸಲಾಗುವುದು.
ಸರ್ಕಾರದ ವತಿಯಿಂದ ಪರಿಹಾರ ನೀಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.