alex Certify ಗಮನಿಸಿ: ಕೊರೊನಾ ತಡೆಗೆ ಆಯುಷ್ ಔಷಧ ವಿತರಣೆಗೆ ಯಾವುದೇ ಪರವಾನಿಗೆ ನೀಡಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಕೊರೊನಾ ತಡೆಗೆ ಆಯುಷ್ ಔಷಧ ವಿತರಣೆಗೆ ಯಾವುದೇ ಪರವಾನಿಗೆ ನೀಡಿಲ್ಲ

ಧಾರವಾಡ: ಕೊವಿಡ್-19 ಪರಿಸ್ಥಿತಿಯಲ್ಲಿ ಕೆಲವು ಸಂಘ ಸಂಸ್ಥೆಯವರು ಸಾರ್ವಜನಿಕರಿಗೆ ಆಯುಷ್ ಔಷಧಿಗಳನ್ನು ವಿತರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿಗಳು ಬರುತ್ತಿವೆ.

ಜಿಲ್ಲಾ ಆಯುಷ್ ಇಲಾಖೆಯು ಅಧಿಕೃತವಾಗಿ ಇಂತಹ ಸಂಸ್ಥೆಗಳಿಗೆ ಯಾವುದೇ ಪರವಾನಿಗೆ ನೀಡಿರುವುದಿಲ್ಲ. ಸಂಘ ಸಂಸ್ಥೆಯವರು ಸಾರ್ವಜನಿಕರಿಗೆ ನೀಡುವ ಆಯುಷ್ ಔಷಧಿಗಳಿಗೆ ಅಧಿಕೃತ ಮಾನ್ಯತೆ ಇರುವುದಿಲ್ಲ.

ಔಷಧಿ ವಿತರಿಸುವುದು ಕಂಡು ಬಂದರೆ ಕೂಡಲೇ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಕಿಲ್ಲಾರಸ್ತೆ, ಧಾರವಾಡ ಇ-ಮೇಲ್  dao.dharwad09@gmail.com ದೂರವಾಣಿ: 0836-2434479 ಸಂಪರ್ಕಿಸಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...