ಬೆಂಗಳೂರು: ಪ್ರಿಯಕರನೊಂದಿಗೆ ಮಹಿಳೆ ಗಂಡನ ಮೇಲೆಯೇ ದಾಳಿ ನಡೆಸಿದ್ದಾಳೆ.
ಪ್ರಿಯಕರ ಮತ್ತು ಪತ್ನಿ ಸೇರಿಕೊಂಡು ಪತಿ ಮೇಲೆ ರಾಸಾಯನಿಕ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸರ್ಕಲ್ ಬಳಿ ನಡೆದಿದೆ.
ವಿಶ್ವನಾಥ್ ಮತ್ತು ಅವರ ತಂಗಿ ನಿರ್ಮಲಾ ಅವರ ಮೇಲೆ ರಾಸಾಯನಿಕ ದಾಳಿ ನಡೆಸಲಾಗಿದೆ. ವಿಶ್ವನಾಥ್ ಪತ್ನಿ ಮತ್ತು ಆಕೆಯ ಪ್ರಿಯಕರ ಕೃತ್ಯವೆಸಗಿರುವ ಆರೋಪ ಕೇಳಿ ಬಂದಿದೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.