ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಸಾರ್ವಜನಿಕರು ತತ್ತರಿಸಿಹೋಗಿದ್ದಾರೆ. ಮನೆಯಿಂದ ಹೊರಗೆ ಹೋಗಲೂ ಹಿಂದೆ ಮುಂದೆ ನೋಡುವಂತಾಗಿದ್ದು, ಸೋಂಕಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ.
ಇದರ ಮಧ್ಯೆ ಎಟಿಎಂ ಬಳಕೆದಾರರಿಗೆ ಆಘಾತ ನೀಡುವಂತಹ ಸುದ್ದಿಯೊಂದು ಇಲ್ಲಿದೆ. ಕೇರಳದ ಕೊಲ್ಲಂ ಜಿಲ್ಲೆಯ ಕಲ್ಲುವಾದುಕ್ಕಲ್ ಎಂಬಲ್ಲಿ ಹಣ ಪಡೆಯಲು ಹೋದ ಇಬ್ಬರಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
ಈ ಮೊದಲು ಇದೇ ಎಟಿಎಂಗೆ ಸೋಂಕು ಪೀಡಿತ ಮಹಿಳೆಯೊಬ್ಬರು ಹೋಗಿದ್ದು, ಆ ಬಳಿಕ ತೆರಳಿದ ಇಬ್ಬರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಹೀಗಾಗಿ ಎಟಿಎಂ ಬಳಸುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.