ಶಿವಮೊಗ್ಗ: ಆರೋಗ್ಯ ಇಲಾಖೆಯು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಗುತ್ತಿಗೆ ಆಧಾರ ಮೇಲೆ ಕಿರಿಯ ಪುರುಷ ಮತ್ತು ಆರೋಗ್ಯ ಸಹಾಯಕರ 14 ಹುದ್ದೆಯನ್ನು ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ರಾಜ್ಯದ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧೋದ್ಧೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಪಡೆದಿರಬೇಕು. ಅಥವಾ ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2/3ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ ಮುಗಿಸಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗೆ 35ವರ್ಷ, 2ಎ., 2ಬಿ., 3ಎ., 3ಬಿ., ವರ್ಗದವರಿಗೆ 38ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗದ ಅಭ್ಯರ್ಥಿಗಳು 40ವರ್ಷ ವಯೋಮಿತಿ ಮೀರಿರಬಾರದು. ಸಾಮಾನ್ಯ ಅಭ್ಯರ್ಥಿಗಳು-7, 2ಎ-2, 2ಬಿ-1, ಪಜಾ-2, ಪ.ಪಂ.-1 ಹಾಗೂ ಪ್ರವರ್ಗ-1ರಂತೆ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಅಭ್ಯರ್ಥಿಯು ಹೊಂದಿರುವ ಶ್ರೇಣಿ ಮತ್ತು ಮೀಸಲಾತಿಯನ್ವಯ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಸಂಬಂಧಪಟ್ಟ ಹುದ್ದೆಗೆ ನಿಗಧಿಪಡಿಸಿದ ದೃಢೀಕರಿಸಿದ ದಾಖಲೆಗಳ ನಕಲುಪ್ರತಿ, ಇತ್ತೀಚಿನ ಭಾವಚಿತ್ರ, ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ, ವಾಸಸ್ಥಳದ ಪ್ರಮಾಣಪತ್ರ, ವiಹಾನಗರಪಾಲಿಕೆ/ಸಂಬಂಧಿಸಿದ ಪಂಚಾಯಿತಿ ದೃಢೀಕರಣ ಪತ್ರ ಹಾಗೂ ಸ್ವವಿವರಗಳೊಂದಿಗೆ ಜುಲೈ 07ರಂದು ಸಂಜೆಯವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ನಿಗಧಿತ ನಮೂನೆಯ ಅರ್ಜಿ ಹಾಗೂ ಇನ್ನಿತರ ಮಾಹಿತಿಗಾಗಿ ಎನ್.ಯು.ಹೆಚ್.ಎಂ. ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-298172ನ್ನು ಸಂಪರ್ಕಿಸಬಹುದೆಂದು ಹೇಳಲಾಗಿದೆ.