ದಾವಣಗೆರೆ: 2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧ ಅರ್ಜಿ ಆಹ್ವಾನಿಸಿದ್ದು ಕೊರೊನಾ ಹಿನ್ನೆಲೆಯಲ್ಲಿ ಅರ್ಜಿ ಆಹ್ವಾನದ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಉಳಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಮರು ನಿಗದಿಪಡಿಸಲಾದ ದಿನಾಂಕ: ಆರ್‍ಎಸ್‍ಐ (ಸಿಎಆರ್/ಡಿಎಆರ್) 45 ಹುದ್ದೆಗಳು, ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಸಲು ಜುಲೈ 18 ರಂದು ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ.
ಸ್ಪೆ.ಆರ್.ಎಸ್.ಐ(ಕೆ.ಎಸ್.ಆರ್.ಪಿ) 40 ಹುದ್ದೆಗಳು, ಅರ್ಜಿ ಸಲ್ಲಿಸಲು ಜುಲೈ 18. ಜುಲೈ 21 ಶುಲ್ಕ ಪಾವತಿಸಲು ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ. ಎಸ್.ಐ(ಕೆ.ಎಸ್.ಐ.ಎಸ್.ಎಫ್) 51 ಹುದ್ದೆಗಳು ಅರ್ಜಿ ಸಲ್ಲಿಸಲು ಜುಲೈ 18 ಅರ್ಜಿ ಸಲ್ಲಿಸಲು ಮತ್ತು ಜುಲೈ 21 ಶುಲ್ಕ ಪಾವತಿಸಲು ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ.
ಪಿ.ಎಸ್.ಐ (ವೈರ್‍ಲೆಸ್) 26 ಹುದ್ದೆಗಳು, ಅರ್ಜಿ ಸಲ್ಲಿಸಲು ಜುಲೈ 18, ಅರ್ಜಿ ಸಲ್ಲಿಸಲು ಮತ್ತು ಜುಲೈ 21 ಶುಲ್ಕ ಪಾವತಿಸಲು ಕಡೆಯ ದಿನವಾಗಿದೆ ಎಂದು ಹೇಳಲಾಗಿದೆ.