ನನ್ನನ್ನು ಬಿಂಬಿಸುತ್ತಿರುವ ರೀತಿ ನೋವು ತಂದಿದೆ. ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.
ಡ್ರಗ್ಸ್ ಜಾಲದ ಕೇಸ್ ನಲ್ಲಿ ನಾನು ಅಪರಾಧಿಯಲ್ಲ, ಆರೋಪಿಯೂ ಅಲ್ಲ ಎಂದು ಅವರು ಫೇಸ್ಬುಕ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿ ಅನುಶ್ರೀ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ನೋಟಿಸ್ ನೀಡಿದ ಮಾತ್ರಕ್ಕೆ ನಾನು ಆರೋಪಿಯಲ್ಲ, ಡ್ರಗ್ಸ್ ಪ್ರಕರಣದಿಂದ ನನ್ನ ತಾಯಿಗೆ ನೋವಾಗಿದೆ. 12 ವರ್ಷದ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಯಗಳಿಸಿದ್ದೆ. ಆ ಘಟನೆ ನನಗೆ ಉರುಳಾಗುತ್ತದೆ ಎಂದುಕೊಂಡಿರಲಿಲ್ಲ. ನನ್ನನ್ನು ಬಿಂಬಿಸುತ್ತಿರುವ ರೀತಿ ನೋವು ತಂದಿದೆ ಎಂದು ಅವರು ಹೇಳಿದ್ದಾರೆ.
ಅಮ್ಮ ನನಗೆ ಧೈರ್ಯ ತುಂಬಿದ್ದಾರೆ. ನೋಟಿಸ್ ಬಂದಾಗ ಬೇಜಾರಾಗಲಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ಆದರೆ ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ನೋವು ತಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.
https://www.facebook.com/AnchorAnushree/videos/3170445486415771