ಮಂಡ್ಯ: ಕೊರೋನಾ ವೈರಸ್ ಪ್ರಸರಣ ತಡೆಗಟ್ಟುವ ಹಿನ್ನೆಲೆಯಲ್ಲಿ ಉಲ್ಲೇಖ(1)ರ ಸರ್ಕಾರದ ಆದೇಶದ ರೀತ್ಯಾ ಜಿಲ್ಲೆಯಲ್ಲಿನ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ 2855 ಫಲಾನುಭವಿಗಳಿಗೆ ಏಪ್ರಿಲ್-2020 ಮಾಹೆಯಿಂದ ಮುಂದಿನ 3 ತಿಂಗಳ ಅವಧಿಗೆ ಪ್ರತಿ ಮಾಹೆಗೆ ಒಂದರಂತೆ ಒಟ್ಟು 3 ರೀಫಿಲ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಆದೇಶಿಸಲಾಗಿರುತ್ತದೆ.
ಸರ್ಕಾರದ ಆದೇಶ ಅನ್ವಯ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ 2855 ಫಲಾನುಭವಿಗಳಿಂದ ಹಿಂದೆ ಸಂಗ್ರಹಿಸಿದ್ದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯು ಆಹಾರ ನಿರೀಕ್ಷಕರ ಲಾಗಿನ್‍ನಲ್ಲಿ ಈಗಾಗಲೇ ಲಭ್ಯವಿದೆ. ಈ ಮಾಹಿತಿ ತಪ್ಪಾಗಿದ್ದಲ್ಲಿ ಹಾಗೂ ತಿದ್ದುಪಡಿಯಾಗಬೇಕಾದಲ್ಲಿ ಅಂತಹ ಫಲಾನುಭವಿಗಳು ಆಯಾ ತಾಲ್ಲೂಕಿನ ತಹಸೀಲ್ದಾರ್ ರವರ ಕಛೇರಿಯ ಆಹಾರ ಶಾಖೆಗೆ ಭೇಟಿ ನೀಡಿ ಜೂನ್ 10 ರೊಳಗೆ ತಮ್ಮ ಸರಿಯಾದ ಮಾಹಿತಿಯನ್ನು ಆಹಾರ ನಿರೀಕ್ಷಕರಿಗೆ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕೆ ಆರ್ ಪೇಟೆ ಆಹಾರ ನಿರೀಕ್ಷಕರಾದ ಮಂಜುನಾಥ ವಿ ಮೊ.ಸಂ.-9916049452, ಮದ್ದೂರು- ಎಂ.ಕೆ. ರಾಜು(9986323724), ವಿನಯ್ ಪಿ(9036159821), ಮಳವಳ್ಳಿ- ಕೆಂಪರಸ(9632397270) ಕೃಷ್ಣಪ್ಪ ಪಿ.ಕೆ(9449326468), ಮಂಡ್ಯ- ರಮೇಶ್ ಕೆ.ಎಸ್(9164778495), ನಾಗಮಂಗಲ-ವೀಣಾ ಕೆ.ಬಿ.(9110242541), ಮೀನಾಕ್ಷಿ(9986828885) ಪಾಂಡವಪುರ-ನಟರಾಜ ಎಂ(9741403192) ಸಂಪರ್ಕಿಸಬಹುದೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.