ಇತ್ತೀಚೆಗೆ ನಡೆದ ಅಮೆರಿಕಾ ಚುನಾವಣೆಯಲ್ಲಿ ಭಾರತ ಮೂಲಕ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿದ್ದಾರೆ. ಅವರ ಗೌರವಾರ್ಥ ಭಾರತದ ಖ್ಯಾತ ಅಮ್ಯೂಸ್‌ಮೆಂಟ್ ಪಾರ್ಕ್ ಹೊಸ ಆಫರ್ ಪ್ರಕಟಿಸಿ ಗಮನ ಸೆಳೆದಿದೆ.
ಕಮಲಾ ಎಂದು ಹೆಸರಿರುವವರಿಗೆ ಉಚಿತ ಪ್ರವೇಶವನ್ನು ನೀಡುವ ಮೂಲಕ ವಂಡರ್ ಲಾ ವಿಶೇಷ ರೀತಿಯಲ್ಲಿ ಖುಷಿ ಹಂಚಿಕೊಂಡಿತು.
ಜನವರಿ 24ರಂದು ಇಂತಹ ಆಫರ್ ಬೆಂಗಳೂರು, ಕೊಚ್ಚಿ, ಹೈದ್ರಾಬಾದ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನೀಡಲಾಗಿತ್ತು. ಸೂಕ್ತ ಗುರುತಿನ ಚೀಟಿ ದಾಖಲೆ ತೋರಿಸುವ ಷರತ್ತು ಹಾಕಲಾಗಿತ್ತು.
ಆರೋಗ್ಯಕರವಾದ ʼಕಡಲೆಕಾಳಿನ ಸಲಾಡ್’
ಕಮಲಾ ಮಾತ್ರವಲ್ಲ, ಕಮಲ್, ಕಮಾಲ ಮತ್ತು ಕಮಲಂನಂತಹ ಸಮಾನ ಹೆಸರಿನ ಯಾರಾದರೂ ಅವಕಾಶ ಪಡೆಯಬಹುದು ಎಂದು ಪ್ರಚಾರ ನಡೆಸಿತ್ತು.
ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾಗಿದ್ದು ಆಕೆಯ ಅಜ್ಜ ತಮಿಳುನಾಡಿನ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಭಾರತದಲ್ಲಿ ಜನಿಸಿದ್ದ ಕಮಲಾ ತಾಯಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಯುಎಸ್‌ಗೆ ತೆರಳಿದ್ದರು. ಅಲ್ಲಿ ಜಮೈಕಾದವರನ್ನು ಮದುವೆಯಾಗಿದ್ದರು.
ಹಲವಾರು ಭಾಷಣಗಳಲ್ಲಿ, ಹ್ಯಾರಿಸ್ ತಮ್ಮ ಕುಟುಂಬದ ಬೇರುಗಳ ಬಗ್ಗೆ ಮತ್ತು ಭಾರತೀಯ ಮೂಲದ ಅಜ್ಜ ಮತ್ತು ತಾಯಿಯ ಮೌಲ್ಯಗಳಿಂದ ಹೇಗೆ ಮಾರ್ಗದರ್ಶನ ಪಡೆದಿದ್ದೇನೆಂದು ಆಕೆ ಹೇಳಿಕೊಂಡಿದ್ದರು.
https://www.facebook.com/Wonderla/posts/5013060178765447