ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ಸಿ.ಆರ್.ಪಿ.ಎಫ್. ಕಾನ್ಸ್ ಟೇಬಲ್ ಇದೀಗ ಕೈಕೊಟ್ಟು ಪರಾರಿಯಾಗಿದ್ದು, ವಂಚನೆಗೊಳಗಾಗಿರುವ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ.
ಎತ್ತಿನೊಡೆಯಪುರದ ಪ್ರಮೋದ್ ವಂಚಿಸಿ ಪರಾರಿಯಾಗಿರುವ ಸಿ.ಆರ್.ಪಿ.ಎಫ್. ಕಾನ್ಸ್ ಟೇಬಲ್. ಅದೇ ಗ್ರಾಮದ ಅನುಜಾ ಎಂಬಾಕೆಯನ್ನು ಪ್ರೀತಿಸಿ ಎರಡು ತಿಂಗಳ ಹಿಂದೆ ಸಿ.ಆರ್.ಪಿ.ಎಫ್. ಕ್ಯಾಂಪ್ ನಲ್ಲಿಯೇ ವಿವಾಹವಾಗಿದ್ದ. ಇದೀಗ ಪ್ರಮೋದ್ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.
THANK YOU INDIA: ಜಾಹೀರಾತು ಫಲಕಗಳೊಂದಿಗೆ ಭಾರತ, ಮೋದಿಗೆ ಧನ್ಯವಾದ ಹೇಳಿದ ಕೆನಡಾ
ಅಲ್ಲದೇ ಪ್ರಮೋದ್ ವಿರುದ್ಧ ಮತ್ತೊಂದು ದೂರು ಕೇಳಿಬಂದಿದ್ದು, ಆತ ಅನುಜಾಳನ್ನು ಬಿಟ್ಟು ಮತ್ತೊಂದು ಯುವತಿಯನ್ನು ವಿವಾಹವಾಗಲು ಸಿದ್ಧತೆ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಇದೀಗ ನಂದಗುಡಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಅನುಜಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದು, ಕುಟುಂಬದವರ ಜೊತೆ ಧರಣಿ ಕುಳಿತಿದ್ದಾಳೆ. ಪ್ರಮೋದ್ ನನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿರುವ ಪೊಲೀಸರು ಧರಣಿ ಕೈಬಿಡುವಂತೆ ಮನವೊಲಿಸಿದ್ದಾರೆ.