ಬೆಂಗಳೂರು: ಕೆಂಪೇಗೌಡ ಅತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆಯಾಗಿದೆ.
ಗೋದಾಮಿನಲ್ಲಿದ್ದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಜಪ್ತಿ ಮಾಡಿದ್ದ ಚಿನ್ನವನ್ನು ಗೋದಾಮಿನಲ್ಲಿ ಇಡಲಾಗಿತ್ತು. 13 ಪ್ರಕರಣಗಳಲ್ಲಿ ಚಿನ್ನ ಕಳ್ಳಸಾಗಣೆದಾರರಿಂದ 2.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದು ಲೆಕ್ಕಪರಿಶೋಧನೆ ವೇಳೆ ಈ ಚಿನ್ನ ಲೆಕ್ಕಕ್ಕೆ ಸಿಕ್ಕಿಲ್ಲ.
ಏರ್ ಪೋರ್ಟ್ ಕಸ್ಟಮ್ಸ್ ವಿಭಾಗದ ಜಂಟಿ ಆಯುಕ್ತ ಎಂ.ಜೆ. ಚೇತನ್ ಈ ಕುರಿತು ದೂರು ನೀಡಿದ್ದು ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.