ವನ್ಯಜೀವಿ ಫೊಟೋಗ್ರಫಿ ಒಂದು ಅಪರೂಪದ ಹವ್ಯಾಸ. ವನ್ಯಜೀವಿಗಳ ಫೋಟೋಗಳನ್ನು ಸಾಕಷ್ಟು ಜನ ಇಷ್ಟಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹೆಚ್ಚು ಓಡಾಡುತ್ತವೆ.
ಕಬಿನಿ ಅಭಯಾರಣ್ಯದ ಕರಿ ಚಿರತೆಯ ಫೋಟೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಕರಿ ಚಿರತೆ ಗಾಂಭೀರ್ಯದಲ್ಲಿ ನಡೆಯುತ್ತಿರುವ, ಮರದ ಹಿಂದೆ ಅಡಗಿ ನೋಡುತ್ತಿರುವ ಫೋಟೋಗಳು ಇವಾಗಿವೆ.
ಅರ್ಥ್ ಎಂಬ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ ಚಿರತೆಯ ಫೋಟೋವನ್ನು ಶಾಜ್ ಜಂಗ್ ಎಂಬುವವರು ಕ್ಲಿಕ್ ಮಾಡಿದ್ದಾರೆ.
ಭಾನುವಾರ ಸಂಜೆ 5.28ಕ್ಕೆ ಶೇರ್ ಮಾಡಿದ ಫೋಟೋವನ್ನು ನಾಲ್ಕೇ ತಾಸಿನಲ್ಲಿ 1.52 ಲಕ್ಷ ಜನರು ವೀಕ್ಷಿಸಿದ್ದಾರೆ. 36 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ.
ಫೋಟೋಗ್ರಾಫರ್ ಶಾಜ್ ಜಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವನ್ಯಜೀವಿಗಳ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಗೋವಾದಲ್ಲಿ ಕರಿ ಚಿರತೆಯ ಓಡಾಟವನ್ನು ಅಲ್ಲಿನ ಸಿಎಂ ಪ್ರಮೋದ ಸಾವಂತ್ ಪೋಸ್ಟ್ ಮಾಡಿದ್ದರು.
https://www.instagram.com/p/CA-PWUjpjTY/?utm_source=ig_embed