ಡ್ರಗ್ಸ್ ದಂಧೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಸಂಜನಾ ಗಲ್ರಾನಿಯ ಖಾಸಗಿ ವಿಡಿಯೋ ಒಂದನ್ನು ಬಹಿರಂಗಪಡಿಸಿದ್ದ ಪ್ರಶಾಂತ್ ಸಂಬರಗಿ, ಇದೀಗ ಅವರ ಮದುವೆ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಬಹಿರಂಗಗೊಳಿಸಿದ್ದಾರೆ.
ಹೌದು, ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಪ್ರಶಾಂತ್ ಸಂಬರಗಿ, 2018ರಲ್ಲಿಯೇ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರ ಹೆಸರು ಮಾಹಿರಾ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಎಂದು ದಾಖಲೆ ಸಹಿತ ಪೋಸ್ಟ್ ಮಾಡಿದ್ದಾರೆ. ಇನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಧೃಡೀಕರಣ ಪತ್ರವನ್ನೂ ಹಾಕಿದ್ದಾರೆ.
ಮೊದಲಿನಿಂದಲೂ ಸಂಜನಾ ಮೇಲೆ ಆರೋಪಗಳನ್ನು ಮಾಡುತ್ತಿದ್ದ ಸಂಬರಗಿ ಇದೀಗ ಮತ್ತೆ ಅವರ ಮದುವೆ ವಿಚಾರವನ್ನು ಹಾಗೂ ಮತಾಂತರಗೊಂಡಿದ್ದ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ಈಗಾಗಲೇ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸ್ಯಾಂಡಲ್ವುಡ್ ಸೇರಿದಂತೆ ರಾಜಕೀಯ ನಾಯಕರ ಮಕ್ಕಳಿಗೂ ನೋಟಿಸ್ ನೀಡಿದ್ದಾರೆ ಪೊಲೀಸರು.