ಬೆಂಗಳೂರು: ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯ ಕುಡಿಸಿ ಸಿನಿಮಾ ನಟಿ ಮೇಲೆ ಅತ್ಯಾಚಾರ ಎಸಗಿ ಹಣ ವಸೂಲಿ ಮಾಡಲಾಗಿದೆ. ಅತ್ಯಾಚಾರದ ವಿಡಿಯೋ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಮಾಡುವುದಾಗಿ ಬೆದರಿಸಿ ನಟಿಯಿಂದ 20 ಲಕ್ಷ ರೂ. ವಸೂಲಿ ಮಾಡಲಾಗಿದೆ.
ಜೆಪಿ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ 30 ವರ್ಷದ ನಟಿ ದೂರು ನೀಡಿದ್ದು ನಾಯಂಡಹಳ್ಳಿಯ ಮೋಹಿತ್ ಮತ್ತು ಆತನ ತಂದೆ ಮಹದೇವ, ತಾಯಿ ನಾಗವೇಣಿ ಹಾಗೂ ರಾಹುಲ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿಗೆ 2018ರಲ್ಲಿ ಖಾಸಗಿ ಕಂಪನಿ ಸಿಇಒ ಮೋಹಿತ್ ಪರಿಚಯವಾಗಿದ್ದ ಕಂಪನಿಯ ಪ್ರಚಾರ ರಾಯಭಾರಿಯಾಗಿ ನಟಿಯನ್ನು ನೇಮಿಸಿಕೊಂಡಿದ್ದು 2019ರ ಜನವರಿಯಲ್ಲಿ ಗೋವಾಗೆ ಕರೆದುಕೊಂಡು ಹೋಗಿ ಫೋಟೋ ಶೂಟ್ ಮಾಡಿಸಿದ್ದಾನೆ.
ನಂತರದಲ್ಲಿ ಆರ್ಥಿಕ ಸಮಸ್ಯೆಯಾಗಿದೆ ಎಂದು 1.50 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ. ಮೋಹಿತ್ ಕಳೆದ 2019 ರ ಜೂನ್ 22 ರಂದು ನಟಿಯ ಮನೆಯಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮರುದಿನ ನಟಿಯ ಹುಟ್ಟುಹಬ್ಬದ ವೇಳೆ ಆಕೆಗೆ ಮತ್ತು ಬೆರೆಸಿದ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ. ಆ ದೃಶ್ಯಗಳನ್ನು ಸೆರೆಹಿಡಿದು ಬ್ಲಾಕ್ಮೇಲ್ ಮಾಡಿ 20 ಲಕ್ಷ ರೂಪಾಯಿ ದೋಚಿದ್ದಾನೆ ಎಂದು ನೊಂದ ನಟಿ ಜಗಜೀವನ್ ರಾಮ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.