ರಾಣಿ ಮುಖರ್ಜಿ ಅಭಿನಯದ ’ಮೆಹೆಂದಿ’ ಚಿತ್ರದ ಮೂಲಕ ಪರಿಚಿತರಾದ ನಟ ಪರಾಝ್ ಖಾನ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.
ಮೆದುಳಿನ ಸೋಂಕಿನಿಂದ ಬಳಲುತ್ತಿರುವ ಖಾನ್, ಐಸಿಯುನಲ್ಲಿ ಇದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಎದುರಿಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಕೆಮ್ಮು ಹಾಗೂ ಎದೆ ಸೋಂಕಿನಿಂದ ಬಳಲುತ್ತಿರುವ ಅವರನ್ನು ಇತ್ತೀಚೆಗೆ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಫರಾಝ್ ನೆರವಿಗೆ ಬಂದಿರುವ ನಟಿ ಪೂಜಾ ಭಟ್, “ದಯವಿಟ್ಟು ಸಾಧ್ಯವಾದಷ್ಟು ಮಟ್ಟಿಗೆ ಕೊಡುಗೆ ನೀಡಿ. ನಾನೂ ಸಹ ಕೊಡುತ್ತಿದ್ದೇನೆ” ಎಂದು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದುಕೊಂಡಿದ್ದಾರೆ.