
ಉಡುಪಿ ಜಿಲ್ಲೆ ಬಾರ್ಕೂರಿನ ಚೌಳಿಕೆರೆ ಸಮೀಪ ಕೆರೆಗೆ ಕಾರು ಉರುಳಿ ಬಿದ್ದು ಉದ್ಯಮಿ ಸಂತೋಷ್ ಶೆಟ್ಟಿ ಮೃತಪಟ್ಟಿದ್ದಾರೆ.
ಅವರ ಜೊತೆಗಿದ್ದ ಉದ್ಯೋಗಿ ಶ್ವೇತಾ ಎಂಬುವರು ಅಪಘಾತದ ವೇಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ವೇಳೆಯಲ್ಲಿ ಬಾಲಕಿಯೊಬ್ಬಳು ಜೀವ ಉಳಿಸಿದ್ದಾರೆ.
ನಮನಾ ಎಂಬ 15 ವರ್ಷದ ಬಾಲಕಿ ಅಪಘಾತದ ಸ್ಥಳಕ್ಕೆ ತೆರಳಿದ್ದು ಸಮಯಪ್ರಜ್ಞೆಯಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಉಸಿರು ಮರಳುವಂತೆ ಮಾಡಿದ್ದಾರೆ. ಕೆರೆಗೆ ಕಾರು ಬಿದ್ದು, ನೀರು ಕುಡಿದು ಅಸ್ವಸ್ಥರಾಗಿದ್ದ ಶ್ವೇತಾ ಅವರು ನಮನಾ ನೀಡಿದ ಪ್ರಥಮ ಚಿಕಿತ್ಸೆಯಿಂದ ಬದುಕುಳಿದಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿದ ಸ್ಥಳೀಯರು ಆಂಬುಲೆನ್ಸ್ ನಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮನಾ ತೋರಿದ ಸಮಯಪ್ರಜ್ಞೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.