ಬೆಂಗಳೂರು: ಬಿಬಿಎಂಪಿ ಎಇಇ ಆಂಜಿನಪ್ಪ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ನಾಲ್ಕು ತಂಡಗಳು ಬೆಂಗಳೂರು, ಚನ್ನಗಿರಿ, ದಾವಣಗೆರೆ ಸೇರಿದಂತೆ ಹಲವೆಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೀವನ್ ಭೀಮಾನಗರದ ಸರ್ಕಾರಿ ಕ್ವಾಟರ್ಸ್ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 3 ಕಾರು, 1 ಬೈಕ್, 3.5 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ದಾವಣಗೆರೆಯಲ್ಲಿ ಎಸಿಬಿ ಎಸ್.ಪಿ. ಜಯಪ್ರಕಾಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 9.79 ಲಕ್ಷ ನಗದು, 4 ಕಾರು, ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ.