alex Certify ‘ಆರೋಗ್ಯ ಸೇತು’ ಆಪ್ ಕುರಿತು ನಿಮಗೆ ತಿಳಿದಿರಲಿ ಈ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರೋಗ್ಯ ಸೇತು’ ಆಪ್ ಕುರಿತು ನಿಮಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಆರೋಗ್ಯ ಸೇತು ಆಪ್‌ ಅನ್ನು ಎಲ್ಲರೂ ತಮ್ಮ ತಮ್ಮ ಮೊಬೈಲ್ ‌ಗೆ ಅಳವಡಿಸಿಕೊಳ್ಳಿ ಎಂದು ಸರ್ಕಾರ ಹೇಳುತ್ತಲೇ ಇದೆ. ಈಗಾಗಲೇ ಸಾಕಷ್ಟು ಮಂದಿ ಈ ಆಪ್ ಬಳಸುತ್ತಿದ್ದಾರೆ. ಇದೀಗ ಆರೋಗ್ಯ ಇಲಾಖೆ ಆರೋಗ್ಯ ಸೇತು ಹ್ಯಾಂಡಲ್ ‌ನಲ್ಲಿ ಈ ಆಪ್ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಹೌದು, ಈಗಾಗಲೇ ಬ್ಲೂಟೂತ್ ಮುಖಾಂತರ ಸಂಪರ್ಕಿತರ ಮಾಹಿತಿ ಗೊತ್ತಾಗಲಿದೆ. ನೀವು ಯಾರನ್ನಾದರೂ ಸಂಪರ್ಕ ಮಾಡಿದರೆ ಆ ಪಟ್ಟಿಯಲ್ಲಿ ಅವರು ಸೋಂಕಿತರಾಗಿದ್ದರೆ ಅವರ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಈ ಆಪ್. ಇದೀಗ ಈ ಆಪ್ ಮತ್ತಷ್ಟು ವೈಶಿಷ್ಟ್ಯತೆ ಪಡೆದುಕೊಂಡಿದೆ. ಹೀಗಾಗಿ ಅಪ್ಡೇಟ್ ಮಾಡಿಕೊಳ್ಳಿ ಎಂದು ಹೇಳಲಾಗುತ್ತಿದೆ.

ಅಪ್ಡೇಟ್ ಆದ ಆರೋಗ್ಯ ಸೇತು ಆಪ್‌ನಿಂದಾಗಿ ಅಪಾಯ ಮಟ್ಟವನ್ನು ವೇಗವಾಗಿ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಸೋಂಕಿತರನ್ನು ಸಂಪರ್ಕಿಸಿದರೆ ಅದರ ಮಾಹಿತಿಯೂ ತಿಳಿಯಲಿದೆಯಂತೆ. ಬ್ಯೂಟೂತ್ ವ್ಯಾಪ್ತಿಯಲ್ಲಿನ ಸಂಪರ್ಕಿತರ ಮಾಹಿತಿಯನ್ನು ಈ ಆಪ್ ತಿಳಿಸುತ್ತದೆ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...