ಹುಬ್ಬಳ್ಳಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿಯನ್ನು ಪಡೆಯದೇ ಇರುವ ವಲಸೆ ಕಾರ್ಮಿಕ ಫಲಾನುಭವಿಗಳಿಗೆ ಹಾಗೂ ಪಡಿತರ ಚೀಟಿ ಹೊಂದದೇ ಇರುವ ಫಲಾನುಭವಿಗಳಿಗೆ ಮೇ ಮತ್ತು ಜೂನ್ -2020 ರ ಮಾಹೆಗೆ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿಯನ್ನು ಹಾಗೂ ಕೇಂದ್ರ ಸರ್ಕಾರದ ಹಂಚಿಕೆಗೆ ಅನುಗುಣವಾಗಿ ಕಡಲೇಕಾಳನ್ನು ಉಚಿತವಾಗಿ ಕೊಡಲಾಗುವುದು.
ವಲಸಿಗ ಕಾರ್ಮಿಕ ಫಲಾನುಭವಿಗಳು ಹಾಗೂ ಪಡಿತರ ಚೀಟಿ ಹೊಂದದೇ ಇರುವ ಫಲಾನುಭವಿಗಳಿಗೆ ಮೇ ಮತ್ತು ಜೂನ್ 2020 ರ ಎರಡೂ ತಿಂಗಳ ಸೇರಿ ಪ್ರತಿ ಸದಸ್ಯರು (ಆಧಾರ್ ಕಾರ್ಡ್ ಹೊಂದಿದವರು) ತಿಂಗಳಲ್ಲಿ 5 ಕೆಜಿ ಯಂತೆ ಒಟ್ಟು 10 ಕೆಜಿ ಅಕ್ಕಿ ಮತ್ತು 2 ಕೆಜಿ ಕಡಲೆಕಾಳಗಳನ್ನು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಜೂನ್ 30/2020 ರ ಒಳಗೆ ಓ.ಟಿ.ಪಿ ಮೂಲಕ ತಮ್ಮ ಆಧಾರ್ ಸಂಖ್ಯೆ ನೀಡಿ ತಂತ್ರಾಂಶದಲ್ಲಿ ಯಾವುದೇ ಪಡಿತರ ಚೀಟಿಯನ್ನು ಹೊಂದಿಲ್ಲವೆಂಬುದು ಖಚಿತಪಡಿಸಿಕೊಂಡು ಪಡಿತರ ಪಡೆಯಬಹುದಾಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.