ನಿವೃತ್ತಿ ಬಳಿಕ ಪಿಂಚಣಿ ಪಡೆಯುತ್ತಿರುವವರೆಲ್ಲ ನವೆಂಬರ್ 30ರ ಒಳಗಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿತ್ತು. 80 ವರ್ಷ ಮೇಲ್ಪಟ್ಟವರು ಆನ್ ಲೈನ್ ನಲ್ಲೇ ಪ್ರಮಾಣಪತ್ರ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೊರೊನಾ ಹಿನ್ನಲೆಯಲ್ಲಿ ಇದೀಗ ಜೀವನ ಪ್ರಮಾಣ ಪತ್ರ ಸಲ್ಲಿಕೆ ಅವಧಿಯನ್ನು ಡಿಸೆಂಬರ್ 31, 2020 ರ ವರೆಗೆ ವಿಸ್ತರಿಸಲಾಗಿದೆ.
ಆಧಾರ್ ಮೂಲಕ ಆನ್ ಲೈನ್ ನಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಪಿಂಚಣಿದಾರರು ಪಡೆದುಕೊಳ್ಳಬಹುದು. ಅದನ್ನು ಸಲ್ಲಿಕೆ ಮಾಡೋದು ಹೇಗೆ ಅನ್ನೋದನ್ನು ನೋಡೋಣ.
ನೀವು ಮನೆಯಲ್ಲೇ ಈ ಕೆಲಸ ಮಾಡುತ್ತೀರಿ ಎಂದಾದಲ್ಲಿ ಡೇಟಾ ಕ್ಯಾಪ್ಚರ್ ಮಾಡಲು STQC ಪ್ರಮಾಣೀಕೃತ ಬಯೋಮೆಟ್ರಿಕ್ ಡಿವೈಸ್ ಬೇಕು. ಯಾವುದೇ ನಾಗರಿಕ ಸೇವಾ ಕೇಂದ್ರ ಅಥವಾ ಪಿಂಚಣಿ ವಿತರಣಾ ಸಂಸ್ಥೆಯಲ್ಲೂ ಈ ಕೆಲಸ ಮಾಡಬಹುದು.
ಜೀವನ್ ಪ್ರಮಾಣ್ ಅರ್ಜಿಯನ್ನು ನಿಮ್ಮ ಪಿಸಿ ಅಥವಾ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆ, ಹೆಸರು, ಮೊಬೈಲ್ ನಂಬರ್, PPO ನಂಬರ್, ಪೆನ್ಷನ್ ಖಾತೆಯ ಸಂಖ್ಯೆ, ಬ್ಯಾಂಕ್ ವಿವರ, ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಹೆಸರು, ಪಿಂಚಣಿ ವಿತರಣೆ ಪ್ರಾಧಿಕಾರದ ಹೆಸರು ಇವನ್ನೆಲ್ಲ ನಮೂದಿಸಿ.
ಆಧಾರ್ ದೃಢೀಕರಣ ಪೂರ್ಣಗೊಂಡ ಬಳಿಕ ಜೀವನ್ ಪ್ರಮಾಣ್ ಐಡಿಯನ್ನು ನಮೂದಿಸಿ ಜೀವನ್ ಪ್ರಮಾಣ್ ವೆಬ್ ಸೈಟ್ ನಿಂದ ಪ್ರಮಾಣಪತ್ರದ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.