ನವದೆಹಲಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ದೇಶದ ಅತಿದೊಡ್ಡ ಸಾರಿಗೆ ಸಂಸ್ಥೆ ರೈಲ್ವೆಯಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ತಾಂತ್ರಿಕೇತರ 35,208 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು. 24,605 ಹುದ್ದೆಗಳು ಪದವಿ ಹಂತದ ಹುದ್ದೆಗಳಾಗಿದ್ದು, 10603 ಹುದ್ದೆಗಳು ಪದವಿಪೂರ್ವ ಹುದ್ದೆಗಳಿಗೆ ಕಾಯ್ದಿರಿಸಲಾಗಿದೆ.
ಡಿಎ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ಪಿಂಚಣಿ ಯೋಜನೆ, ವೈದ್ಯಕೀಯ ಪ್ರಯೋಜನ ಇತರ ವಿಶೇಷ ಭತ್ಯೆ ಸೇರಿ 7ನೇ ವೇತನ ಆಯೋಗ ಅನ್ವಯ ವೇತನ, ಭತ್ಯೆ ಪಡೆಯಬಹುದಾಗಿದೆ.
ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಟೈಮ್ ಕೀಪರ್, ಟ್ರೈನ್ ಕ್ಲರ್ಕ್, ಕಮರ್ಷಿಯಲ್ ಟಿಕೆಟ್ ಕ್ಲರ್ಕ್, ಟ್ರಾಫಿಕ್ ಅಸಿಸ್ಟೆಂಟ್, ಕಮರ್ಷಿಯಲ್ ಅಪ್ರೆಂಟೀಸ್, ಭಾರತೀಯ ರೈಲ್ವೆ ವಲಯಗಳು ಉತ್ಪಾದನಾ ಘಟಕಗಳಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ, ವಯೋಮಿತಿ ಮೊದಲಾದ ವಿವರಗಳಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು ಎಂದು ಹೇಳಲಾಗಿದೆ.