ಸಾರ್ವಜನಿಕರಿಗೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾದಿಂದಾಗಿ ಶಾಲಾ – ಕಾಲೇಜುಗಳು ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿವೆ. ಇವುಗಳ ಪುನಾರಾರಂಭ ಇನ್ನೂ ಅನಿಶ್ಚಿತತೆಯಿಂದ ಕೂಡಿದ್ದು, ಇದರ ಮಧ್ಯೆ ಶೈಕ್ಷಣಿಕ ಅವಧಿಯನ್ನು ಕಡಿತಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಹೀಗಾಗಿ ಶೇಕಡಾ 30ರಷ್ಟು ಪಠ್ಯವನ್ನು ಕಡಿತ ಮಾಡಲಾಗುತ್ತಿದ್ದು, ಇದರಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಕುರಿತ ಪಠ್ಯವನ್ನು ಏಳನೇ ತರಗತಿ ಪುಸ್ತಕದಿಂದ ಕೈಬಿಡಲಾಗಿದೆ. 6 ಮತ್ತು 10ನೇ ತರಗತಿಯಲ್ಲಿ ಈ ಪಠ್ಯವನ್ನು ಮುಂದುವರೆಸಲಾಗಿದೆ.
ಪುಸ್ತಕಗಳಲ್ಲಿ ಟಿಪ್ಪು ಪಠ್ಯವನ್ನು ಕೈಬಿಡಬೇಕೆಂದು ಈ ಹಿಂದೆ ಒತ್ತಾಯ ಕೇಳಿಬಂದಿದ್ದು, ಹೀಗಾಗಿ ಸರ್ಕಾರ ಪರಿಶೀಲನೆಗೆಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿ ಟಿಪ್ಪು ಪಠ್ಯವನ್ನು ಉಳಿಸಿಕೊಳ್ಳುವುದು ಸೂಕ್ತ ಎಂದು ಹೇಳಿದ್ದ ಕಾರಣ ಸರ್ಕಾರಕ್ಕೆ ಒಪ್ಪಿಗೆ ನೀಡಿತ್ತು. ಇದೀಗ ಪಠ್ಯ ಕಡಿತ ಮಾಡುವ ವೇಳೆ ಟಿಪ್ಪು ಪಠ್ಯವನ್ನು 7ನೇ ತರಗತಿ ಪುಸ್ತಕದಿಂದ ಕೈಬಿಡಲಾಗಿದೆ. ಪಠ್ಯ ಪುಸ್ತಕದಲ್ಲಿನ ಶೇಕಡಾ 30 ರಷ್ಟು ಪಠ್ಯವನ್ನು ಕೈ ಬಿಡಲಾಗಿದ್ದು, ಇದರಲ್ಲಿ ಟಿಪ್ಪು ಪಠ್ಯ ಕೂಡ ಸೇರಿದೆ.