ಕೊರೊನಾ ಕಾರಣಕ್ಕೆ ಲಾಕ್ಡೌನ್ ಜಾರಿಯಾಗಿದ್ದ ಕಾರಣ ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಲಾಕ್ಡೌನ್ ಸಡಿಲಿಕೆಯಾದರೂ ಸಹ ಮುನ್ನೆಚ್ಚರಿಕೆ ಕಾರಣಕ್ಕೆ ಸೇವೆಗಳನ್ನು ಆರಂಭಿಸಿರಲಿಲ್ಲ.
ಇದೀಗ 5 ತಿಂಗಳ ಬಳಿಕ ಸೆಪ್ಟೆಂಬರ್ ಹದಿನಾಲ್ಕರ ಇಂದಿನಿಂದ ಆಶ್ಲೇಷ ಬಲಿ – ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಸೇರಿದಂತೆ ವಿವಿಧ ಸೇವೆಗಳು ಆರಂಭವಾಗಿವೆ. ಜೊತೆಗೆ ಸೇವಾರ್ಥಿಗಳಿಗೆ ಭೋಜನ ಪ್ರಸಾದವನ್ನೂ ಸಹ ವಿತರಿಸಲಾಗುತ್ತದೆ.
ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಮಧ್ಯಾಹ್ನ 3.30 ರಿಂದ ರಾತ್ರಿ 8 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದು, ಪ್ರತಿದಿನ 30 ಭಕ್ತರಿಗೆ ಮಾತ್ರ ಸರ್ಪಸಂಸ್ಕಾರ ಹಾಗೂ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶವಿರುತ್ತದೆ.