
ರಾಜ್ಯದಲ್ಲಿಂದು ಕೊರೊನಾದಿಂದ ಗುಣಮುಖರಾಗಿ 34,057 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ 59,3078 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ.
ಗುರುವಾರದ ಕೋವಿಡ್ 19 ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 27.64 ಪ್ರತಿಶತವಿದ್ದರೆ, ಸಾವಿನ ಶೇಕಡಾವಾರು ಪ್ರಮಾಣ 0.97 ಪ್ರತಿಶತವಾಗಿದೆ.
ಕಳೆದ 24 ಗಂಟೆಗಳಲ್ಲಿ ಬಳ್ಳಾರಿಯಲ್ಲಿ 14, ಬೆಂಗಳೂರು ಗ್ರಾಮಾಂತರದಲ್ಲಿ 13, ಬೆಂಗಳೂರು ನಗರದಲ್ಲಿ 161, ಬೀದರ್ 4, ಚಾಮರಾಜನಗರ 5, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 1, ಚಿತ್ರದುರ್ಗ 1, ದಕ್ಷಿಣ ಕನ್ನಡ 5, ಧಾರವಾಡ 9, ಗದಗ 5, ಹಾಸನ 10, ಹಾವೇರಿ 9, ಕಲಬುರಗಿ 1, ಕೊಡಗು 5, ಕೋಲಾರ 3, ಕೊಪ್ಪಳ 4, ಮಂಡ್ಯ 11, ಮೈಸೂರು 15 , ರಾಯಚೂರು 4, ರಾಮನಗರ 4, ಶಿವಮೊಗ್ಗ 10, ತುಮಕೂರು 11, ಉಡುಪಿ 6, ಉತ್ತರ ಕನ್ನಡ 14, ವಿಜಯಪುರ 8, ಯಾದಗಿರಿಯಲ್ಲಿ 5 ಮಂದಿ ಕೋವಿಡ್ನಿಂದ ಸಾವಿಗೀಡಾಗಿದ್ದಾರೆ.
