ಒಂದೂವರೆ ವರ್ಷಗಳ ಹಿಂದೆ ಮೂರು ಸಾವಿರ ರೂ.ಗಳಿಗೆ ಖರೀದಿಸಿ ತಂದು ಸಾಕಿದ್ದ ಟಗರು ಈಗ ಬರೋಬ್ಬರಿ 48 ಸಾವಿರ ರೂ.ಗಳಿಗೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದೆ.
ಸೊರಬ ತಾಲ್ಲೂಕಿನ ಗುಡವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಂಬಿ ಗ್ರಾಮದ ಅಡೆಮನೆ ತೋಪಪ್ಪ ಎಂಬವರು ಸಾಕಿದ್ದ ಟಗರಿಗೆ ಈ ಭಾರಿ ಬೆಲೆ ಸಿಕ್ಕಿದೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಅರೆಂದೂರು ಗ್ರಾಮದ ವ್ಯಕ್ತಿಯೊಬ್ಬರು ಈ ಬೆಲೆ ನೀಡಿ ಅಡೆಮನೆ ತೋಪಪ್ಪ ಅವರು ಸಾಕಿದ್ದ ಟಗರನ್ನು ಖರೀದಿಸಿದ್ದಾರೆ.