
ಕೂತು ತಿನ್ನುವಷ್ಟು ದುಡ್ಡಿದ್ದರೂ ಇನ್ನಷ್ಟು ಬೇಕು ಎಂಬ ಮನಸ್ಥಿತಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಕೋಟಿಗಟ್ಟಲೆ ಹಣವಿದ್ದರೂ ಎಲ್ಲವನ್ನು ತೊರೆದು ಜೈನ ದೀಕ್ಷೆ ಪಡೆಯೋದಿಕ್ಕೆ ಮುಂದಾಗಿರೋದು ಆಶ್ಚರ್ಯದ ಸಂಗತಿ. ಇಂತಹದೊಂದು ಘಟನೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಕೋಟ್ಯಾಧಿಶ್ವರ ದೀಪಕ್ ಕುಮಾರ ಮತ್ತು ಮೀನಾಕುಮಾರಿ ಅವರ ಏಕೈಕ ಪುತ್ರಿ 21 ವರ್ಷದ ಯಶೀತಾ ಇದೀಗ ಜೈನ್ ದೀಕ್ಷೆ ಪಡೆಯೋದಿಕ್ಕೆ ಮುಂದಾಗಿದ್ದಾರೆ. ಸನ್ಯಾಸತ್ವ ಪಡೆಯುವ ಮುನ್ನ ಲೋಕ ಸಂಚಾರ ಮಾಡುವುದು ಅವರ ಸಂಪ್ರದಾಯ ಅದರಂತೆ ಈ ಯುವತಿ ಯಾದಗಿರಿ ನಗರಕ್ಕೆ ಆಗಮಿಸಿದ್ದರು.
ಇಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯ್ತು. ನಂತರ ದವಸ ಧಾನ್ಯ, ಬಟ್ಟೆಗಳನ್ನು ದಾನವಾಗಿ ನೀಡಿದರು ಈ ಯುವತಿ.
ಇನ್ನು ಮುಂದಿನ ವರ್ಷ ಅಂದರೆ 2021ರ ಮಾರ್ಚ್ 21ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜೈನ ಧರ್ಮದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸನ್ಯಾಸತ್ವ ಪಡೆಯಲಿದ್ದಾರೆ ಯಶೀತಾ. ಇನ್ನು ಯಾದಗಿರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗವಹಿಸಿದ್ದರು. ಅದೇನೆ ಇರಲಿ ಜೈನ ಧರ್ಮದ ಪ್ರಚಾರ ಹಾಗೂ ಆತ್ಮ ಕಲ್ಯಾಣಕ್ಕಾಗಿ ಇಂತಹದೊಂದು ನಿರ್ಧಾರವನ್ನು ಈ ಯುವತಿ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.