![](https://kannadadunia.com/wp-content/uploads/2020/11/edccfe29-bffa-4918-8452-b6ca37a0b891.jpg)
2021 ಅಂದರೆ ಮುಂದಿನ ವರ್ಷದ ರಜೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಮುಂದಿನ ವರ್ಷದಲ್ಲಿನ ಹಬ್ಬ, ಸಾರ್ವಜನಿಕ ರಜಾ ದಿನ, ರಾಷ್ಟ್ರೀಯ ಹಬ್ಬಗಳ ಪಟ್ಟಿ ರಿಲೀಸ್ ಆಗಿದ್ದು, ಮುಂದಿನ ವರ್ಷ ಪ್ರವಾಸಕ್ಕೆಂದು ಪ್ಲಾನ್ ಮಾಡೋದಾದ್ರೆ ಈಗಲೇ ಮಾಡಿ.
ಕರ್ನಾಟಕ ಇಂಡಸ್ಟ್ರಿಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರ ಪ್ರಕಾರ, ವಾರ್ಷಿಕ ಕನಿಷ್ಠ ಹತ್ತು ದಿನ ರಜೆಯನ್ನು ಎಲ್ಲಾ ಸಂಸ್ಥೆಗಳು ನೀಡಬೇಕಿದೆ. ಅದರಂತೆ ರಾಜ್ಯ ಕಾರ್ಮಿಕ ಇಲಾಖೆ ಮುಂದಿನ ವರ್ಷದ ಹತ್ತು ರಜೆಗಳನ್ನು ಘೋಷಣೆ ಮಾಡಿದೆ. ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ದಿನದಂದು ಕಡ್ಡಾಯವಾಗಿ ರಜೆಯನ್ನು ನೀಡಲು ಸೂಚಿಸಲಾಗಿದೆ.
ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ರಜೆಗಳು ಬಂದಿದೆ. ಅಕ್ಟೋಬರ್‌ನಲ್ಲಿ 6 ರಜೆ ನವೆಂಬರ್‌ನಲ್ಲಿ 4 ರಜೆಗಳು ಇವೆ. ಜನವರಿ 14 ಗುರುವಾರ ಮಕರ ಸಂಕ್ರಾಂತಿ, ಜನವರಿ 2 ಮಂಗಳವಾರ ಗಣರಾಜ್ಯೋತ್ಸವ, ಮಾರ್ಚ್ 11 ಗುರುವಾರ ಮಹಾಶಿವರಾತ್ರಿ, ಏಪ್ರಿಲ್ 2 ಶುಕ್ರವಾರ ಗುಡ್ ಫ್ರೈಡೇ, ಏಪ್ರಿಲ್ 13 ಮಂಗಳವಾರ ಚಾಂದ್ರಮಾನ ಯುಗಾದಿ, ಏಪ್ರಿಲ್ 14 ಬುಧವಾರ, ಡಾ.ಅಂಬೇಡ್ಕರ್ ಜಯಂತಿ, ಏಪ್ರಿಲ್ 25 ಭಾನುವಾರ ಮಹಾವೀರ ಜಯಂತಿ, ಮೇ 1 ಶನಿವಾರ ಕಾರ್ಮಿಕರ ದಿನಾಚರಣೆ, ಮೇ 14 ಶುಕ್ರವಾರ ರಂಜಾನ್, ಬಸವ ಜಯಂತಿ, ಜುಲೈ 21 ಬುಧವಾರ ಬಕ್ರೀದ್, ಆಗಸ್ಟ್ 15 ಭಾನುವಾರ ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 19 ಗುರುವಾರ ಮೊಹರಂ, ಆಗಸ್ಟ್ 20 ಶುಕ್ರವಾರ ವರಮಹಾಲಕ್ಷ್ಮೀ ವೃತ, ಸೆಪ್ಟಂಬರ್ 10 ಶುಕ್ರವಾರ ಗಣೇಶ ಚತುರ್ಥಿ, ಅಕ್ಟೋಬರ್ 2 ಶನಿವಾರ ಗಾಂಧಿ ಜಯಂತಿ, ಅಕ್ಟೋಬರ್ 6 ಬುಧವಾರ ಮಹಾಲಯ ಅಮಾವಾಸ್ಯ, ಅಕ್ಟೋಬರ್ 14 ಗುರುವಾರ ಆಯುಧಪೂಜೆ, ಅಕ್ಟೋಬರ್ 15 ಶುಕ್ರವಾರ ವಿಜಯದಶಮಿ, ಅಕ್ಟೋಬರ್ 19 ಮಂಗಳವಾರ ಈದ್ ಮಿಲಾದ್, ಅಕ್ಟೋಬರ್ 20 ಬುಧವಾರ ವಾಲ್ಮೀಕಿ ಜಯಂತಿ, ನವೆಂಬರ್ 1 ಸೋಮವಾರ ಕನ್ನಡ ರಾಜ್ಯೋತ್ಸವ, ನವೆಂಬರ್ 3 ಬುಧವಾರ ನರಕ ಚತುರ್ದಶಿ, ನವೆಂಬರ್ 5 ಶುಕ್ರವಾರ ಬಲಿಪಾಡ್ಯವಿ, ನವೆಂಬರ್ 22 ಸೋಮವಾರ ಕನಕದಾಸ ಜಯಂತಿ, ಡಿಸೆಂಬರ್ 25 ಶನಿವಾರ ಕ್ರಿಸ್ಮಸ್ ಗೆ ರಜೆ ಘೋಷಣೆ ಮಾಡಲಾಗಿದೆ.