ಬೆಂಗಳೂರು: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಿಂದ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಹಾಗಾಗಿ ಲಸಿಕೆ ಪಡೆಯಲು ಆನ್ ಲೈನ್ ನಲ್ಲಿ ನೋಂದಣಿ ಮಾಡುವುದು ಅಗತ್ಯ. ಹಾಗಾದರೆ ನೋಂದಣಿ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ
18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಲು ಬಯಸಿದರೆ ನಾಳೆಯಿಂದಲೇ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ʼಮಾಸ್ಕ್ʼ ಬಳಕೆ ವೇಳೆ ನೀವೂ ಮಾಡ್ತೀರಾ ತಪ್ಪು…? ಹಾಗಾದ್ರೆ ತಪ್ಪದೆ ತಿಳಿದಿರಿ ಈ ಮಾಹಿತಿ
* www.cowin.gov.inಗೆ ಲಾಗ್ ಇನ್ ಆಗಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
* ಒಟಿಪಿ ಮೆಸೆಜ್ ಬಂದಾಕ್ಷಣ ಒಟಿಪಿ ನಮೂದಿಸಿ, ಪರಿಶೀಲನೆ ಬಟನ್ ಕ್ಲಿಕ್ ಮಾಡಿ
* ವ್ಯಾಕ್ಸಿನೇಷನ್ ಪುಟದ ನೋಂದಣಿ ತೆರೆದುಕೊಳ್ಳುತ್ತದೆ
* ಭಾವಚಿತ್ರ, ಐಡಿ ಪ್ರೂಫ್ ಜೊತೆಗೆ ಅಗತ್ಯವಿರುವ ವಿವರಗಳನ್ನು ತುಂಬಿರಿ
* ಬಳಿಕ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
* ನೋಂದಣಿ ಮುಗಿದ ಬಳಿಕ ನಿಮಗೆ ಖಾತೆ ವಿವರ ಪುಟ ತೆರೆದುಕೊಳ್ಳುತ್ತದೆ. ಖಾತೆ ವಿವರ ಪುಟದಲ್ಲಿ ನಿಮ್ಮ ನೇಮಕಾತಿಯನ್ನು ನಿಗದಿಪಡಿಸಬಹುದು
* ಹೆಚ್ಚಿನ ಜನರ ಹೆಸರು ನೋಂದಣಿ ಮಾಡಿಸಬೇಕು ಎಂದಿದ್ದರೆ ಪುಟದ ಕೊನೇ ಭಾಗದಲ್ಲಿರುವ ಇನ್ನಷ್ಟು ಸೇರಿಸಿ ಬಟನ್ ಕ್ಲಿಕ್ ಮಾಡಿ ವಿವರಗಳನ್ನು ನಮೂದಿಸಬೇಕು.