ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟಿನ ಕುರಿತು ಸಿಸಿಬಿ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾರನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಮೂತ್ರ, ರಕ್ತ, ಕೂದಲು ಮತ್ತು ಉಗುರಿನ ಮಾದರಿಯನ್ನು ಸಂಗ್ರಹಿಸಲಾಗಿದೆ.
ರಕ್ತ ಮತ್ತು ಮೂತ್ರದಲ್ಲಿ ಡ್ರಗ್ ಅಂಶ ಕೆಲವು ದಿನಗಳು ಮಾತ್ರ ಇರುತ್ತದೆ ಎನ್ನಲಾಗಿದ್ದು, ಆದರೆ ಕೂದಲು ಹಾಗೂ ಉಗುರಿನಲ್ಲಿ 90 ದಿನಗಳ ಕಾಲದವರೆಗೆ ಇರುತ್ತದೆ ಎನ್ನಲಾಗಿದೆ. ಹೀಗಾಗಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇವುಗಳ ಪರೀಕ್ಷೆ ನಡೆಯಲಿದೆ.
ಮತ್ತೊಂದು ಗಮನಾರ್ಹ ಅಂಶವೆಂದರೆ ಬೆಂಗಳೂರು ಪೊಲೀಸರು ಈವರೆಗೆ ಪ್ರತಿ ತಿಂಗಳು ನೂರಾರು ಆರೋಪಿಗಳನ್ನು ಡ್ರಗ್ಸ್ ಸಂಬಂಧ ಪ್ರಕರಣಗಳಿಗಾಗಿ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸುತ್ತಿದ್ದರಾದರೂ ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎನ್.ಡಿ.ಪಿ.ಎಸ್. ಕಾಯಿದೆಯಡಿ ಬಂಧಿತ ಇಬ್ಬರು ಆರೋಪಿಗಳ ಡ್ರಗ್ಸ್ ಸೇವನೆ ಕುರಿತಾಗಿ ಪರೀಕ್ಷೆ ನಡೆಸಿದ್ದಾರೆಂದು ಹೇಳಲಾಗಿದೆ.