ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಸಿಗೆಗಳ ಬಾಡಿಗೆ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅನಾವಶ್ಯಕವಾಗಿ ಬಾಡಿಗೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಆದರೆ ಇದೀಗ ಬಿ.ಎಸ್. ಯಡಿಯೂರಪ್ಪ ಇದಕ್ಕೆ ಬ್ರೇಕ್ ಹಾಕುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಹೌದು, ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನದ ಜಾಗದಲ್ಲಿ ದೊಡ್ಡ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಲ್ಲಿ ಬಾಡಿಗೆ ಬೆಡ್ ಖರೀದಿಸಲು ತಿಂಗಳಿಗೆ 24 ಕೋಟಿ ಖರ್ಚಾಗುತ್ತಿದ್ದು, ಅಧಿಕಾರಿಗಳು ಎಸ್ಟಿಮೇಟ್ ಹಾಕಿದ್ದರು. ಕೇವಲ ಬಾಡಿಗೆ ತೆಗೆದುಕೊಳ್ಳುವುದಕ್ಕೆ ಇಷ್ಟು ಹಣ ವೆಚ್ಚ ಮಾಡಲು ತಯಾರಾಗಿದ್ದ ಅಧಿಕಾರಿಗಳಿಗೆ ಸಿಎಂ ಶಾಕ್ ನೀಡಿದ್ದಾರೆ. ಕೇವಲ 7.32 ಕೋಟಿ ಖರ್ಚು ಮಾಡಿಸುವ ಮೂಲಕ ಅನಗತ್ಯ ಖರ್ಚಿಗೆ ಬ್ರೇಕ್ ಹಾಕಿದ್ದಾರೆ.
10100 ಬೆಡ್‌ಗಳ ಬಾಡಿಗೆಗಾಗಿ ತಿಂಗಳಿಗೆ 24 ಕೋಟಿ ಖರ್ಚು ಮಾಡುವ ಬದಲು ಅದನ್ನು ಖರೀದಿ ಮಾಡಿದರೆ ಹಣ ಉಳಿಯುತ್ತದೆ ಎಂದು ಯೋಚಿಸಿ ಬೆಡ್ ಖರೀದಿ ಮಾಡಲು ಕ್ರಮ ವಹಿಸಲು ಸೂಚಿಸಿದ್ದಾರೆ. ಹಾಗು ಖರೀದಿ ಮಾಡುವ ಬೆಡ್‌ಗಳನ್ನು ಈಗ ಕೋವಿಡ್ ಕೇರ್ ಸೆಂಟರ್‌ಗೆ ಬಳಸಿಕೊಂಡು ನಂತರ ಅದನ್ನು ಮುಂದೆ ವಿದ್ಯಾರ್ಥಿ ನಿಲಯಗಳಿಗೆ ಉಪಯೋಗಿಸುವಂತೆ ಸೂಚನೆ ನೀಡಿದ್ದಾರೆ.