ಕೊರೊನಾ ನಡುವೆಯೇ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ನಮ್ಮ ರಾಜ್ಯದ ನರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೇರೆ ದೇಶದವರು ಉದ್ಯೋಗವಕಾಶ ನೀಡಲು ಮುಂದೆ ಬರುತ್ತಿದ್ದಾರಂತೆ.
ಹೌದು, 1000 ಮಂದಿ ನರ್ಸ್ ಗಳಿಗೆ ಬೇಡಿಕೆ ಬಂದಿದೆ. ಬೇಡಿಕೆ ಬಂದ ದೇಶಗಳಿಗೆ ಶುಶ್ರೂಶಕಿಯರನ್ನು ಕಳಿಸಲಾಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ. ಯುರೋಪ್ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿರುವ ಆಸ್ಪತ್ರೆಗಳು ಇವರಿಗೆ ಉದ್ಯೋಗವಾಶ ನೀಡಲು ಮುಂದೆ ಬಂದಿದೆ. ಅಷ್ಟೆ ಅಲ್ಲ ಬ್ರಿಟನ್ ಸರಕಾರ ನಮ್ಮ ಶುಶ್ರೂಶಕಿಯರಿಗೆ ವಾರ್ಷಿಕ ತಲಾ 20 ಲಕ್ಷ ರೂಪಾಯಿ ಪ್ಯಾಕೇಜ್ ನಿಗದಿ ಮಾಡಿದೆ ಎಂದಿದ್ದಾರೆ.
ಇನ್ನು ಬೇರೆ ದೇಶದಲ್ಲಿ ಕೆಲಸ ಮಾಡಲು ಸಂವಹನ ಸೇರಿದಂತೆ ಒಂದಿಷ್ಟು ತರಬೇತಿ ಬೇಕು. ಅಂತಹ ತರಬೇತಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮ ವತಿಯಿಂದ ನೀಡಲಾಗುತ್ತದೆ. ವಿದೇಶದಲ್ಲಿ ಇವರಿಗೆ ಉದ್ಯೋಗ ಕೊಡಿಸುವ ಸಲುವಾಗಿ ಸರ್ಕಾರವೇ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಸ್ಥಾಪಿಸಿದೆ ಎಂದಿದ್ದಾರೆ.