ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ನಾಳೆ ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಸಲಿದ್ದು, ಹೆಚ್.ಡಿ.ರೇವಣ್ಣ ಅವರ ಸಲಹೆಯಂತೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹೊರಟ್ಟಿ, ಹೆಚ್.ಡಿ.ರೇವಣ್ಣ ಅವರು ನಿಗದಿ ಮಾಡಿದ ಮುಹೂರ್ತದಲ್ಲಿ ಸೋಮವಾರ ಬೆಳಿಗ್ಗೆ 10:15ರಿಂದ 10:30ರೊಳಗೆ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಈ ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸುವಂತೆ ರೇವಣ್ಣ ಹೇಳಿದ್ದಾರೆ ಎಂದರು.
ಭಾರತದ ಲಸಿಕೆಗಾಗಿ ಇನ್ನೂ 25 ರಾಷ್ಟ್ರಗಳಿಂದ ಬೇಡಿಕೆ
ಪಕ್ಷ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಜಿಲ್ಲಾವಾರು ಸಭೆಗಳು ಆರಂಭವಾಗಿದೆ. ಆಡಳಿತಾರೂಢ ಪಕ್ಷಗಳ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇನೆ ಎಂದು ಹೇಳಿದರು.