ಹತ್ತು ವರ್ಷದ ಪುಟ್ಟ ಬಾಲಕಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಳು. ಹೀಗಾಗಿಯೇ ಶಾಲೆಗೆ ರಜೆ ಹಾಕಿ ಮನೆಯಲ್ಲಿ ಸಂತಸದಿಂದ ಆಟವಾಡುತ್ತಿದ್ದಳು. ಆದರೆ ಈ ಸಂಭ್ರಮವೇ ಮುಳುವಾಗಿದ್ದು, ವಿಧಿಯ ಅಟ್ಟಹಾಸಕ್ಕೆ ಬಾಲಕಿ ಬಲಿಯಾಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಏನೆಕಲ್ ಎಂಬಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ಬಾಬು ಅಜಿಲ ಮತ್ತು ಸುಶೀಲಾ ದಂಪತಿ ಪುತ್ರಿ ಶ್ರುತಿ ಸಾವನ್ನಪ್ಪಿದ್ದಾಳೆ.
‘ಕೊರೊನಾ’ದಿಂದಾದ ಹಾನಿ ಕುರಿತು ಶಾಕಿಂಗ್ ಸಂಗತಿ ಬಹಿರಂಗ
ಶೃತಿ ಮನೆಯ ಪಕ್ಕದಲ್ಲಿದ್ದ ಸೀಬೆ ಮರಕ್ಕೆ ಸೀರೆ ಕಟ್ಟಿದ್ದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಉರುಳಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.