ಹುಟ್ಟುಹಬ್ಬದ ದಿನದಂದೇ ಯುವಕನೊಬ್ಬ ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.
ಸಾಗರದ ಗಾಂಧಿನಗರ ನಿವಾಸಿ ಮನೋಜ್ ಸೋಮವಾರದಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೋಜ್ ಅವರ 21ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೇಕ್ ಗೆ ಆರ್ಡರ್ ಸಹ ಮಾಡಿದ್ದರು ಎನ್ನಲಾಗಿದ್ದು, ಇದೀಗ ಮನೋಜ್ ಸಾವಿನ ಹಿನ್ನೆಲೆಯಲ್ಲಿ ದುಃಖ ಮಡುಗಟ್ಟಿದೆ.