ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಲ್ಲೇ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಹೆಸರು ಸೃಷ್ಟಿಸಿ ವಂಚನೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿ ಪಿ.ಹರೀಶೇಖರನ್, ಎಫ್ ಐ ಯು ಸಿಐಡಿ ಡಿವೈಎಸ್ ಪಿ ಪ್ರಕಾಶ್ ರಾಠೋಡ್ ಹಾಗೂ ಸಿಐಡಿ ಡಿವೈ ಎಸ್ ಪಿ ಹುಮಾಯೂನ್ ನಾಗ್ತೆ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಠಿಸಿರುವ ಖದೀಮರು, ಅಧಿಕಾರಿಗಳ ಸ್ನೇಹಿತರಿಗೆ ಪೇಟಿಎಂ ಹಾಗೂ ಗೂಗಲ್ ಪೇ ಮೂಲಕ ಹಣ ಕಳುಹಿಸುವಂತೆ ಮೆಸೇಜ್ ಮಾಡುತ್ತಿದ್ದರು ಎನ್ನಲಾಗಿದೆ.
ಇದೀಗ ಮೂವರು ಪೊಲೀಸ್ ಅಧಿಕಾರಿಗಳು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.