ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಸಿಗದೇ ಜನ ಅಳುತ್ತಿದ್ದಾರೆ ರೆಮ್ ಡಿಸಿವಿರ್ ಪೂರೈಕೆಯಲ್ಲಿಯೂ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ರೆಮ್ ಡಿಸಿವಿರ್ ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಮಾಡಿದ್ದಾದರೂ ಏನು? ಮೊನ್ನೆ ನಾನು ಗಲಾಟೆ ಮಾಡಿದ್ದಕ್ಕೆ 450 ಲಸಿಕೆಗಳನ್ನು ಕೊಟ್ಟರು. ಇದು ಏನಕ್ಕೂ ಸಾಲುವುದಿಲ್ಲ. ಬಿಜೆಪಿ ಸಂಸದರು ಬಂದು ಬೇಕಾದಷ್ಟು ರೆಮ್ ಡಿಸಿವಿರ್ ಇಂಜಕ್ಷನ್ ತೆಗೆದುಕೊಂಡು ಹೋಗುತ್ತಾರೆ. ಹಾಗಾದರೆ ಹಾಸನ ಜಿಲ್ಲೆಯವರು ಜನರಲ್ಲವೇ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ರೋಗಿಗಳಿಗೆ ಆರೋಗ್ಯ ಸಚಿವಾಲಯದಿಂದ ಹೊಸ ಮಾರ್ಗಸೂಚಿ
ಜಿಲ್ಲೆಗೆ ಕೊರೊನಾ ಲಸಿಕೆ ಕೊಡಲು ಸಾಧ್ಯವಿಲ್ಲ ಎಂದಾದರೆ ಜಿಲ್ಲೆಯನ್ನು ರಾಜ್ಯದಿಂದಲೇ ತೆಗೆದುಬಿಡಿ. ಹಾಸನ ಜಿಲ್ಲೆಗೆ ತಕ್ಷಣ ರೆಮ್ ಡಿಸಿವಿರ್ ಪೂರೈಕೆ ಮಾಡಬೇಕು ಇಲ್ಲವಾದಲ್ಲಿ ನಾಳೆಯಿಂದ ಸಿಎಂ ಮನೆ ಮುಂದೆ ಧರಣಿ ನಡೆಸುತ್ತೇನೆ. ಅಗತ್ಯವಿದ್ದರೆ ಅಲ್ಲಿಯೇ ಮಲುಗಲು ಕೂಡ ಸಿದ್ಧ. ನನ್ನನ್ನು ಬಂಧಿಸಿದರೂ ಚಿಂತೆಯಿಲ್ಲ ಎಂದು ಎಚ್ಚರಿಕೆ ನಿಡಿದ್ದಾರೆ.