ಕರ್ನಾಟಕವು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿದ್ದು ಸುಂದರ ಕೆತ್ತೆನೆಗಳ ಮೂಲಕ ಪ್ರವಾಸಿಗರನ್ನು ಹಾಗೂ ಕಲಾರಸಿಕರನ್ನು ಆಕರ್ಷಿಸುತ್ತದೆ.
ಹಾಸನ ನಗರದಲ್ಲಿ ನೆಲೆಸಿರುವ ಹಾಸನಾಂಬೆ ಬಲು ಪ್ರಸಿದ್ದಿ. ಸುಮಾರು 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದಲ್ಲಿ. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಹಾಸನ ಎಂಬ ಹೆಸರು ಬಂದಿದೆ.
ಸಪ್ತ ಮಾತೃಕೆಯರು ವಾರಣಾಸಿಯಿಂದ (ಕಾಶಿ) ದಕ್ಷಿಣಕ್ಕೆ ವಾಯುವಿಹಾರಾರ್ಥವಾಗಿ ಬಂದರೆಂದೂ, ಆ ಸಪ್ತ ಮಾತೃಕೆಯರೆಂದರೆ, ಬ್ರಾಹ್ಮೀದೇವಿ, ಮಹೇಶ್ಷರಿ, ಕೌಮಾರಿ, ವೈಷ್ಣವಿ, ವಾರಾಹಿ, ಮತ್ತು ಚಾಮುಂಡಿ ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆಂದು ನಂಬಲಾಗಿದೆ. ವರ್ಷಕ್ಕೊಮ್ಮೆ ದೇವಿಯರ ದರ್ಶನವಿದೆ. ಆಶ್ವೀಜ ಮಾಸ ಪೂರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು, ಪುನಃ ಒಂದು ವರ್ಷದ ಕಾಲ ದೇವಿಯರ ದರ್ಶನ ಸಿಗುವುದಿಲ್ಲ.
ಹಾಸನಾಂಬ ದೇವಿಯ ವಿಶೇಷವೆಂದರೆ ನಂಬಿದ ಭಕ್ತರ ಹರಕೆಗಳನ್ನು ತಿರಿಸುವುದು ಹಾಗೂ ಅವರ ಜೀವನದಲ್ಲಿ ಹೊಸಬೆಳಕು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವುದು. ಇದರಿಂದಾಗಿಯೇ ರಾಜ್ಯ ಮತ್ತು ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಬಂದು ದರ್ಶನ ಪಡೆಯುತ್ತಾರೆ.