ಹಳೆ ಟಿವಿ ಹಾಗೂ ರೇಡಿಯೋಗೆ ಏಕಾಏಕಿ ಫುಲ್ ಡಿಮಾಂಡ್ ಬಂದಿದ್ದು, ಇವುಗಳನ್ನು ಖರೀದಿಸಲು ಮುಂದಾಗಿರುವ ವ್ಯಕ್ತಿಗಳು ಲಕ್ಷಾಂತರ ರೂಪಾಯಿ ನೀಡುತ್ತಾರೆ ಎಂಬ ವದಂತಿಯಿಂದ ಯುವಕರು ಈಗ ಇವುಗಳನ್ನು ಹುಡುಕಿಕೊಂಡು ಅಡ್ಡಾಡತೊಡಗಿದ್ದಾರೆ.
ಇಂತಹ ಘಟನೆಗಳು ಕೋಲಾರದಲ್ಲಿ ಬೆಳಕಿಗೆ ಬಂದಿದ್ದು, ಇವುಗಳನ್ನು ಹುಡುಕಿಕೊಂಡು ಬರುತ್ತಿರುವವರನ್ನು ನೋಡಿ ಸ್ವತಃ ಟಿವಿ ರಿಪೇರಿ ಅಂಗಡಿಯವರೇ ದಂಗಾಗಿ ಹೋಗಿದ್ದಾರೆ.
ಹಳೆ ಟಿವಿ ಹಾಗೂ ರೇಡಿಯೋಗಳಲ್ಲಿ ರೆಡ್ ಮರ್ಕ್ಯೂರಿ ಬಳಸಲಾಗುತ್ತದೆ ಎಂದು ಹೇಳಲಾಗಿದ್ದು, ಇದಕ್ಕೆ ಭಾರಿ ಬೆಲೆ ಇದೆ ಎಂಬ ಕಾರಣಕ್ಕಾಗಿಯೇ ಇವುಗಳನ್ನು ಖರೀದಿಸಲು ಕೆಲವರು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ರೆಡ್ ಮರ್ಕ್ಯೂರಿ ಮಾರಾಟ ಹಾಗೂ ಖರೀದಿ ಶಿಕ್ಷಾರ್ಹ ಅಪರಾಧವಾಗಿದ್ದು, ಇವುಗಳನ್ನು ಕೇಳಿಕೊಂಡು ಯಾರಾದರೂ ಬಂದರೆ ಅವರ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದು ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಮನವಿ ಮಾಡಿದ್ದಾರೆ.