ಬೆಂಗಳೂರು: ನವರಾತ್ರಿ ಹಬ್ಬದ ಬೆನ್ನಲ್ಲೇ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ. ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಭಾಗ ಹೆಚ್ಚುವರಿ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳನ್ನು ಆರಂಭಿಸಿದೆ.
ಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರಕ್ಕೆ ಯೋಜನೆ ರೂಪಿಸಲಾಗಿದ್ದು, ಅಕ್ಟೋಬರ್ 20ರಿಂದ ನವೆಂಬರ್ 30ರವರೆಗೆ ವಿಶೇಷ ರೈಲು ಓಡಲಿದೆ. ಈ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಬೇಡಿಕೆ ಹೆಚ್ಚುವ ಕಾರಣಕ್ಕೆ ಈ ಕೇಂದ್ರಗಳನ್ನು ಸ್ಥಾಪಿಸಿದೆ.
ಬೆಂಗಳೂರಿನ ಮಲ್ಲೇಶ್ವರಂ ರೈಲು ನಿಲ್ದಾಣ, ಚಿಕ್ಕಬಾಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ವೈಟ್ ಫೀಲ್ಡ್ ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಕೌಂಟರ್ ಗಳನ್ನು ಇಂದಿನಿಂದ ಆರಂಭಿಸಲಾಗುತ್ತಿದೆ.
ಗೌರಿಬಿದನೂರು, ಮದ್ದೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕುಪ್ಪಂ ರೈಲು ನಿಲ್ದಾಣಗಳಲ್ಲಿ ಕೂಡ ಹೆಚ್ಚುವರಿ ಕೌಂಟರ್ ಗಳನ್ನು ತೆರೆಯಲಾಗಿದೆ.