alex Certify ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಪಾತ್ರವೇನು…? ಬಲಿದಾನವೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಪಾತ್ರವೇನು…? ಬಲಿದಾನವೇನು…?

ಬೆಂಗಳೂರು: ನೆಹರು ನಿಧನರಾದಾಗ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತದ ಹರಿಕಾರ ಎಂದು ಬರೆದಿತ್ತು. ಇದನ್ನು ನೆಹರು ಹೇಳಿ ಬರೆಸಿದ್ರಾ…? ನೆಹರು ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಪಾತ್ರ, ಬಲಿದಾನವೇನು…? ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.

ನೆಹರು ಅಲ್ಪಸಂಖ್ಯಾತರು ತಳವೂರುವಂತೆ ಮಾಡಿದರು. ಆದರೆ ಬಿಜೆಪಿಯವರು ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ನೆಹರು ಕುಟುಂಬ ಪ್ರಾಣತ್ಯಾಗ ಮಾಡಿದೆ. ಆದರೆ ಬಿಜೆಪಿ ಇದನ್ನು ಎಲ್ಲಿಯೂ ಹೇಳಲ್ಲ. ಭಗತ್ ಸಿಂಗ್, ವಿವೇಕಾನಂದರ ಹೆಸರು ಮುಂದೆ ತರ್ತಾರೆ, ಪಟೇಲರ ಪ್ರತಿಮೆ ಮಾಡಿ ಆರ್ ಎಸ್ ಎಸ್ ಅಂತಾರೆ…..ಇವರೆಲ್ಲ ಆರ್ ಎಸ್ ಎಸ್ ನಿಂದ ಬಂದವರಾ ಎಂದು ಗುಡುಗಿದರು.

ಸುಳ್ಳು ಹುಟ್ಟಿದ್ದೇ ಆರ್ ಎಸ್ ಎಸ್ ನಿಂದ. ಇವರ ಬಗ್ಗೆ ಎಚ್ಚರದಿಂದ ಇರಬೇಕು. ಇಷ್ಟಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಪಾತ್ರವೇನು ಎಂಬುದನ್ನು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...