ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ. ಇದೀಗ ರಾಜ್ಯ ಸರ್ಕಾರ ಇದನ್ನು ಸಾಕಾರಗೊಳಿಸಲು ಮುಂದಾಗುವ ಮೂಲಕ ಸಿಹಿ ಸುದ್ದಿ ನೀಡಿದೆ.
ಹೌದು, ಮುಂದಿನ ಎರಡು ವರ್ಷದೊಳಗೆ 10 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ವಸತಿರಹಿತರಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಅಲ್ಲದೆ ಗ್ರಾಮೀಣ ಭಾಗದ ಜನರಿಗಾಗಿ 1.24 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿರುವ ಸಚಿವರು, ಜೊತೆಗೆ ರಾಜ್ಯದ 200 ಕೊಳಗೇರಿಗಳಲ್ಲಿ 70,000 ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.